×
Ad

ಪುತ್ತೂರು ವಿಧಾನ ಸಭಾ ಕ್ಷೇತ್ರ: ಜೆಡಿಎಸ್ ಪದಾಧಿಕಾರಿಗಳ ಆಯ್ಕೆ

Update: 2023-02-19 18:06 IST

ಪುತ್ತೂರು: ಜಾತ್ಯಾತೀತ ಜನತಾ ದಳ ಪುತ್ತೂರು ವಿಧಾನ ಸಭಾ ಕ್ಷೇತ್ರದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ದ.ಕ.ಜಿಲ್ಲಾ ಜನತಾದಳ ಜಾತ್ಯಾತೀತ ಇದರ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಅವರ ಆದೇಶದ ಮೇರೆಗೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಅವರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

ಹಿರಿಯ ಉಪಾಧ್ಯಕ್ಷರಾಗಿ ಬಾಬು ರಾಜೇಂದ್ರ ಗೌಡ ಕೊಳ್ತಿಗೆ ಮತ್ತು ಅಬ್ದುಲ್ ಕುಂಞಿ ಜಾಲಗದ್ದೆ, ಉಪಾಧ್ಯಕ್ಷರಾಗಿ ಕವಿರಾಜ್ ಗೌಡ ಗುಂಡ್ಯ, ರಾಧಾಕೃಷ್ಣ ಸಾಲ್ಯಾನ್ ಮತ್ತು ಬಾಲಕೃಷ್ಣ ರೈ ಪುಣಚ, ಮಹಾ ಪ್ರಧಾನ ಕಾರ್ಯದರ್ಶಿಯಾಗಿ  ಮಹಾವೀರ ಜೈನ್, ಪ್ರಧಾನ ಕಾರ್ಯದರ್ಶಿಯಾಗಿ ಆಶ್ಲೇಷ್ ಭಟ್, ರಹಿಮಾನ್ ಮೇದರಬೆಟ್ಟು, ಲೋಕನಾಥ ಪಕ್ಕಳ, ಎಂ. ಸುರೇಶ್ ಕುಮಾರ್ ಬಪ್ಪಳಿಗೆ ಮತ್ತು ಜಿ.ಕೆ. ಶಾಫಿ ಗೋಳಿತ್ತಡಿ, ಕಾರ್ಯದರ್ಶಿಯಾಗಿ ಇಬ್ರಾಹಿಂ ಕೆದಿಲ, ಸಿಯಾಬ್, ಉಪೇಂದ್ರ ಸಂಟ್ಯಾರ್, ಮಾಮು ಪರ್ಲಡ್ಕ, ಧನಂಜಯ ಗೌಡ ನರಿಮೊಗರು ಮತ್ತು ಶಾಕಿರ್ ಕಬಕ ಇವರು ಆಯ್ಕೆಗೊಂಡಿದ್ದಾರೆ. 

Similar News