ಕುದ್ರೋಳಿ ಮಖಾಂ ಉರೂಸ್‌ಗೆ ಚಾಲನೆ
ಮಂಗಳೂರು: ನಗರದ ಕುದ್ರೊಳಿಯ ಕರ್ಬಲಾ ಕಾಂಪೌಂಡ್‌ನಲ್ಲಿ ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ ಮಖಾಂ ಉರೂಸ್‌ಗೆ ದ.ಕ.ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಶನಿವಾರ ಚಾಲನೆ ನೀಡಿದರು.
ದರ್ಗಾ ಅಧ್ಯಕ್ಷ ಮುಸ್ತಾಕ್ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು. ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ, ಕುದ್ರೋಳಿ ಎಂಜೆಎಂ ಖತೀಬ್ ಮುಹಮ್ಮದ್ ಬಾಖವಿ, ಕುದ್ರೋಳಿ ನಡುಪಳ್ಳಿ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಬಿ. ಅಬೂಬಕ್ಕರ್, ಮಾಜಿ ಮೇಯರ್ ಕೆ.ಅಶ್ರಫ್, ಮಾಜಿ ಕಾರ್ಪೊರೇಟರ್ ಎಂ. ಅಬ್ದುಲ್ ಅಝೀಝ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಪಕೀರಬ್ಬ ಮಾಸ್ಟರ್ ಮಾರೋಡಿ, ಕುದ್ರೋಳಿಯ ಸಯ್ಯದ್ ಖಾದಿರ್ ಷಾ ವಲಿಯುಲ್ಲಾಹಿ ದರ್ಗಾದ ಉಪಾಧ್ಯಕ್ಷರಾದ ಹಾಜಿ ಎಂ. ಅಬೂಬಕ್ಕರ್, ಅಲ್ತಾಫ್ ಹುಸೈನ್, ನಡುಪಳ್ಳಿ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾರೀಸ್, ಮಾಜಿ ಸದಸ್ಯ ಕೆ. ಹುಸೈನ್, ದ.ಕ.ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್‌ನ ಉಪಾಧ್ಯಕ್ಷ ಎನ್‌ಕೆ ಅಬೂಬಕ್ಕರ್, ದರ್ಗಾ ಸಮಿತಿ ಸದಸ್ಯರಾದ ಅಬ್ದುಲ್ಲಾ ಕೆಎಚ್‌ಬಿ, ನವಾಝ್ ಅಬ್ಬಾಸ್, ಆಸಿಫ್, ಗಪೂರ್ ಯೂಸುಫ್, ಖಲೀಲ್ ಕಬೀರ್ ಮತ್ತಿತರರು ಉಪಸ್ಥಿತರಿದ್ದರು.
ದರ್ಗಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಕಾರ್ಯಕ್ರಮ ನಿರೂಪಿಸಿದರು.