ಬ್ರಹ್ಮಾವರ:ವಿದ್ಯಾರ್ಥಿಗಳಿಗೆ ವಿದ್ಯುನ್ಮಾನ ಮತಯಂತ್ರ ಅರಿವು, ಜಾಗೃತಿ ಅಭಿಯಾನ
Update: 2023-02-19 20:22 IST
ಬ್ರಹ್ಮಾವರ: ಇಲ್ಲಿನ ಕ್ರಾಸ್‌ಲ್ಯಾಂಡ್ ಕಾಲೇಜಿನಲ್ಲಿ ಶನಿವಾರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿದ್ಯುನ್ಮಾನ ಮತಯಂತ್ರಗಳ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು.
ಉಡುಪಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಹಾಗೂ ಚುನಾವಣಾ ವಲಯಾಧಿಕಾರಿ ಡಾ.ಗುರುರಾಜ್ ಪ್ರಭು, ಚಾಂತಾರು ಗ್ರಾಮ ಪಂಚಾಯಿತಿ ಗ್ರಾಮ ಲೆಕ್ಕಿಗರಾದ ಸೌಮ್ಯ, ಪಿಡಿಓ ಸತೀಶ ನಾಯ್ಕ, ಸದಸ್ಯ ನಿತ್ಯಾನಂದ ಪೂಜಾರಿ, ಕಾಲೇಜಿನ ಪ್ರಾಂಶುಪಾಲ ಜಾನ್ಸನ್ ಜೇಕಬ್ ಹಾಗೂ ಚುನಾವಣಾ ಸಾಕ್ಷರತಾ ಕ್ಲಬ್‌ನ ಬಿಜು ಜೇಕಬ್ ಈ ವೇಳೆ ಉಪಸ್ಥಿತರಿದ್ದರು.