×
Ad

ಮಂಗಳೂರು: ಎಲ್‌ಜಿ ಇಲೆಕ್ಟ್ರಾನಿಕ್ಸ್‌ನಿಂದ ಎಐ ಡ್ಯುವೆಲ್ ಕೂಲ್ ಏರ್‌ ಕಂಡಿಶನರ್ ಮಾರುಕಟ್ಟೆಗೆ

Update: 2023-02-20 10:48 IST

ಮಂಗಳೂರು, ಫೆ.20: ಇಲೆಕ್ಟ್ರಾನಿಕ್ ಜಗತ್ತಿನ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಎಲ್‌ಜಿ ಇಲೆಕ್ಟ್ರಾನಿಕ್ಸ್‌ನಿಂದ ಎಐ ಡುಎಲ್ ಕೂಲ್ ಏರ್‌ಕಂಡಿಶನರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ನಗರದ ಸಿಟಿ ಸೆಂಟರ್ ಬಳಿಯ ಕೆ.ಎಸ್ ರಾವ್ ರಸ್ತೆಯಲ್ಲಿರುವ ಎಲ್‌ಜಿ ಬೆಸ್ಟ್ ಶಾಪ್‌ನಲ್ಲಿ ಈ ನೂತನ ಶ್ರೇಣಿಯ ಎಐ ಡುಎಲ್ ಕೂಲ್ ಏರ್ ಕಂಡಿಶನರ್‌ಗಳನ್ನು ಮಿಸ್ಬಾ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್ ನ ಅಧ್ಯಕ್ಷ ಬಿ.ಎಂ.ಮುಮ್ತಾಝ್ ಅಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಈ ಸಂದರ್ಭ ಡಾ.ಮೆಹಫೂಝ್, ಗ್ರೂಪ್‌4 ಆಡಳಿತ ನಿರ್ದೇಶಕರಾದ ಬಿ.ಬಶೀರ್,  ಅಬೂಬಕರ್ ಮತ್ತು ಬಿ.ಎ. ಇಬ್ರಾಹಿಂ, ಮಂಗಳೂರು ಡಿಜಿವಾಲೆ ಕಾರ್ಪೊರೇಶನ್‌  ಮ್ಯಾನೇಜಿಂಗ್‌ ಡೈರೆಕ್ಟರ್ ಅಫಾಮ್, ಎಲ್‌ಜಿಯ ಏರಿಯಾ‌ ಮ್ಯಾನೇಜರ್ ರಕ್ಷಿತ್, ಬ್ರಾಂಚ್ ಮ್ಯಾನೇಜರ್ ಅಶ್ವಿನ್ ಕುಮಾರ್,‌ ಏರಿಯಾ‌ ಮಾರ್ಕೆಟಿಂಗ್‌ ಮ್ಯಾನೇಜರ್ ಪ್ರಮೋದ್, ಟ್ರೈನರ್ ಪ್ರಸನ್ನ ಮೊದಲಾದವರು ಉಪಸ್ಥಿತರಿದ್ದರು.

 ಈ ನೂತನ ಶ್ರೇಣಿಯ ಏರ್ ಕಂಡಿಷನರ್‌ಗಳು ಉತ್ತಮವಾದ ಡುಎಲ್ ಕೂಲ್ ಇನ್ವರ್ಟರ್ ಕಂಪ್ರೇಸರ್, ಗರಿಷ್ಠ ವಿದ್ಯುತ್ ದಕ್ಷತೆ ಹಾಗೂ ಎಲ್ಲಾ ರೀತಿಯ ಅನುಕೂಲತೆಗಳಿಂದ ಕೂಡಿದೆ. ಎಐನಿಂದ ನಡೆಸಲ್ಪಡುವ ಈ ನೂತನ ಶ್ರೇಣಿಯ ಏರ್ ಕಂಡಿಷನರ್‌ಗಳು ಬಹು ನಿರ್ಮಿತ ಸೆನ್ಸಾರ್‌ಗಳು ಮತ್ತು ಅತ್ಯುನ್ನತ ದರ್ಜೆಯ ಸ್ಪೀಡ್ ಡುವೆಲ್ ರೋಟರಿ ಕಂಪ್ರೆಸರ್ ಟೆಕ್ನಾಲಜಿಯನ್ನು ಹೊಂದಿದ್ದು, ಅತ್ಯುತ್ತಮ ಕೂಲಿಂಗ್ ಅನ್ನು ಒದಗಿಸಲಿದೆ.  ಅತ್ಯುತ್ತಮ ಸ್ಮಾರ್ಟ್ ತಂತ್ರಜ್ಞಾನ ಮತ್ತು ವಿದ್ಯುತ್ ಉಳಿತಾಯವನ್ನು ನೀಡುವ ಎಲ್ಲಾ ತಾಂತ್ರಿಕ ಸೌಲಭ್ಯಗಳೊಂದಿಗೆ ಎಲ್‌ಜಿಯ ಈ ನೂತನ ಏರ್‌ಕಂಡಿಷನರ್‌ಗಳು  4 ವೇ ಸ್ವಿಂಗ್ ,  ಯುವಿ ನ್ಯಾನೋ ಮತ್ತು ಏರ್ ಪ್ಯೂರಿಫಿಕೇಶನ್‌ನಂತಹ ವೈಶಿಷ್ಟ್ಯವನ್ನು ಹೊಂದಿದೆ. ಕಂಪ್ರೆಸರ್ ಗೆ 10 ವರ್ಷಗಳ ವಾರಂಟಿ ನೀಡುತ್ತದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

 ವೈಫೈ (ಥಿನ್‌ಕ್ಯೂ),  ಕನ್ವರ್ಟಬಲ್ 6 ಇನ್ 1 ವೈಶಿಷ್ಟ್ಯಗಳೊಂದಿಗೆ ವಿಂಡೋ ಇನ್‌ವರ್ಟರ್ ಎಸಿಗಳನ್ನು ಹೊಂದಿರುವ ಯುವಿ ಶ್ರೇಣಿಯ ಎಸಿಗಳನ್ನು ಎಲ್‌ಜಿ ಗ್ರಾಹಕರಿಗೆ ಒದಗಿಸಿದೆ.

ಎಲ್‌ಜಿ ಗ್ರಾಹಕರ ಅನುಕೂಲತೆಗೆ ಅನುಗುಣವಾಗಿ ಎಲ್‌ಜಿ ತಿನ್‌ಕ್ಯೂ ತಂತ್ರಜ್ಞಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿದ್ದು, ಇದು ಬಳಕೆದಾರರಿಗೆ ಫೋನ್‌ನಲ್ಲಿ ಅಪ್ಲಿಕೇಶನ್‌ನೊಂದಿಗೆ ಯಾವುದೇ ಸಮಯದಲ್ಲಿ ಮತ್ತು ಎಲ್ಲಿಂದಲಾದರೂ ಎಸಿಯನ್ನು ನಿಯಂತ್ರಿಸಲು ಮತ್ತು ನಿಗಾ ವಹಿಸಲು ಅವಕಾಶ ಕಲ್ಪಿಸುತ್ತದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Similar News