ಫೆ.26ರಂದು ಬಜಾಲ್ ನಂತೂರಿನಲ್ಲಿ ಸ್ವಲಾತ್ ವಾರ್ಷಿಕ
ಮಂಗಳೂರು, ಫೆ.22: ಬದ್ರಿಯಾ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಹೈಯರ್ ಸೆಕಂಡರಿ ಮದ್ರಸ ಬಜಾಲ್ ನಂತೂರು ಇದರ ಆಶ್ರಯದಲ್ಲಿ ಫೆ.26ರಂದು ಬೃಹತ್ ಸ್ವಲಾತ್ ವಾರ್ಷಿಕ ಮತ್ತು ಸಮಾರೋಪ ಸಮಾರಂಭ ಮಸೀದಿಯ ವಠಾರದಲ್ಲಿ ನಡೆಯಲಿದೆ.
ಅಸ್ಸಯ್ಯದ್ ಅಬೂಬಕ್ಕರ್ ಸಿದ್ದೀಖ್ ತಂಙಳ್ ಮುರ ದುಆ ನೆರವೇರಿಸಲಿದ್ದು, ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರವೂಫ್ ಅಧ್ಯಕ್ಷತೆ ವಹಿಸಲಿರುವರು. ಬಿ.ಜೆ.ಎಂ ಖತೀಬರಾದ ಪಿ.ಎಸ್.ಮುಹಮ್ಮದ್ ಖಾಮಿಲ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಲಿರುವರು.
ದ.ಕ.ಜಿಲ್ಲಾ ವಕ್ಫ್ ಅಧ್ಯಕ್ಷ ಅಬ್ದುನ್ನಾಸಿರ್ ಲಕ್ಕಿಸ್ಟಾರ್, ಮಾಜಿ ಜಿಲ್ಲಾ ವಕ್ಫ್ ಅಧ್ಯಕ್ಷ ಎಸ್.ಎಂ.ಆರ್. ರಶೀದ್ ಹಾಜಿ, ಕೆಪಿಸಿಸಿ ಪ್ರ.ಕಾರ್ಯದರ್ಶಿ ಇನಾಯತ್ ಅಲಿ, ಮರ್ಕಝ್ ಕಾರ್ಯದರ್ಶಿ ಮುಹಮ್ಮದ್ ಹಾಜಿ ಸಾಗರ್, ಹಾಜಿ ಶಾಕಿರ್ ಅಹ್ಮದ್, ಕಾರ್ಪೊರೇಟರ್ ಕೆ.ಇ.ಅಶ್ರಫ್, ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರಿಕ ಸಂಘದ ಉಪಾಧ್ಯಕ್ಷ ಅಹ್ಮದ್ ಬಾವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದಕ್ಕೂ ಮುನ್ನ ಫೆ.24 ರಂದು ಜುಮಾ ನಮಾಝಿನ ಬಳಿಕ ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯ ಗೌರವಾಧ್ಯಕ್ಷ ಅಸ್ಸಯ್ಯದ್ ಆಟಕೋಯ ತಂಙಳ್ ಕುಂಬೋಳ್ ಪ್ರವಚನ ನೀಡಲಿರುವರು. ಫೆ.25 ರಂದು ಮಗ್ರಿಬ್ ನಮಾಝಿನ ಬಳಿಕ ಬಿ.ಜೆ.ಎಂ ಖತೀಬರಾದ ಪಿ.ಎಸ್.ಮುಹಮ್ಮದ್ ಖಾಮಿಲ್ ಸಖಾಫಿ ಸ್ವಲಾತ್ ವಾರ್ಷಿಕ ಉದ್ಘಾಟಿಸಲಿದ್ದು, ಉಸ್ಮಾನ್ ಜೌಹರಿ ನೆಲ್ಯಾಡಿ ಪ್ರವಚನ ನೀಡಲಿದ್ದಾರೆಂದು ಮಸೀದಿಯ ಸಮಿತಿ ಸದಸ್ಯ ನಝೀರ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.