ಸಿಎಎ ವಿರೋಧಿಸಿ ಪ್ರತಿಭಟನೆ: ಅಸ್ಸಾಂ ಶಾಸಕ ಅಖಿಲ್ ಗೊಗೋಯಿ ವಿರುದ್ಧದ ಯುಎಪಿಎ ಪ್ರಕರಣ ಮರು ಆರಂಭ

Update: 2023-02-24 16:41 GMT

ಗುವಾಹಟಿ, ಫೆ. 24: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ 2019 ಡಿಸೆಂಬರ್‌ನಲ್ಲಿ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಅಸ್ಸಾಂ ಶಾಸಕ ಅಖಿಲ್ ಗೊಗೋಯಿ ಹಾಗೂ ಅವರ ಮೂವರು ಸಹವರ್ತಿಗಳ ವಿರುದ್ಧ ದಾಖಲಿಸಲಾಗಿದ್ದ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯನ್ನು ಎನ್ಐಎ ಗುರುವಾರ ಮರು ಆರಂಭಿಸಿದೆ. ‌

ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಆರೋಪ ಪಟ್ಟಿ ರೂಪಿಸಲು ಗುವಾಹಟಿ ಉಚ್ಚ ನ್ಯಾಯಾಲಯ ಫೆಬ್ರವರಿ 9ರಂದು ಎನ್ಐಎಗೆ ಅನುಮತಿ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಗೊಗೋಯಿ ವಿರುದ್ಧದ ಆರೋಪವನ್ನು ತಳ್ಳಿ ಹಾಕಿ ಎನ್ಐಎ ನ್ಯಾಯಾಲಯ 2021ರಲ್ಲಿ ನೀಡಿದ ಆದೇಶ ಪ್ರಶ್ನಿಸಿ ಎನ್ಐಎ ಮೇಲ್ಮನವಿ ಸಲ್ಲಿಸಿತ್ತು. ಮನವಿ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಈ ಆದೇಶ ನೀಡಿದೆ.

Similar News