×
Ad

ಬೈಂದೂರು: ಕುಸಿದು ಬಿದ್ದು ಬ್ಯಾಂಕ್ ಸಹಾಯಕ ಮ್ಯಾನೇಜರ್ ಮೃತ್ಯು

Update: 2023-02-25 12:02 IST

ಬೈಂದೂರು, ಫೆ.25: ಬ್ಯಾಂಕ್ ಆಫ್ ಬರೊಡಾದ ಕಂಬದಕೋಣೆ ಶಾಖೆಯ ಸಹಾಯಕ ಮ್ಯಾನೇಜರ್ ಕುಸಿದು ಬಿದ್ದು ಮೃತಪಟ್ಟ ಘಟನೆ ಫೆ.24ರಂದು ಬೆಳಗ್ಗೆ ಹೇರಂಜಾಲು ಗ್ರಾಮದ ಕಲ್ಗೇರಿ ಎಂಬಲ್ಲಿ ನಡೆದಿದೆ.

ಮೃತರನ್ನು ಕಲ್ಗೇರಿ ನಿವಾಸಿ ನಾಗರಾಜ್ ಮೇರ್ಟ(59) ಎಂದು ಗುರುತಿಸಲಾಗಿದೆ. ಇವರು ಬ್ಯಾಂಕ್ ಆಫ್ ಬರೊಡಾ ಕಂಬದಕೋಣೆ ಶಾಖೆಯಲ್ಲಿ ಸಹಾಯಕ ಮ್ಯಾಣೇಜರ್ ಆಗಿದ್ದರು. ಮನೆಯಿಂದ ಬ್ಯಾಂಕಿಗೆ ತೆರಳಲು ಕಾರನ್ನೇರಲು ತೆರಳುತ್ತಿದ್ದಂತೆ ಒಮ್ಮೆಲೆ ಎದೆನೋವಿ ನಿಂದ ಕುಸಿದು ಬಿದ್ದರೆನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು, ಸ್ಥಳದಲ್ಲೇ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News