ಗಟ್ಟಮನೆ: ಕರ್ನಾಟಕ ಮುಸ್ಲಿಮ್ ಜಮಾಅತ್, ಎಸ್‌ವೈಎಸ್, ಎಸ್ಸೆಸ್ಸೆಫ್ ಶಾಖೆಯ ವಾರ್ಷಿಕ ಮಹಾಸಭೆ
ಪುತ್ತೂರು, ಫೆ.25: ಕರ್ನಾಟಕ ಮುಸ್ಲಿಮ್ ಜಮಾಅತ್, ಎಸ್‌ವೈಎಸ್, ಎಸ್ಸೆಸ್ಸೆಫ್ ಗಟ್ಟಮನೆ ಶಾಖೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಹಮೀದ್ ನೂಜಿಯವರ ಮನೆಯಲ್ಲಿ ನಡೆಯಿತು.
ಈ ವೇಳೆ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಎಸ್ಸೆಸ್ಸೆಫ್ ನೂತನ ಅಧ್ಯಕ್ಷರಾಗಿ ಮುನವ್ವರುದ್ದೀನ್ ಗಟ್ಟಮನೆ, ಪ್ರಧಾನ ಕಾರ್ಯದರ್ಶಿಯಾಗಿ ಸಾದಿಕ್ ಸಿ,ಎಂ,, ಕೋಶಾಧಿಕಾರಿಯಾಗಿ ಆಸಿಫ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಶರಫುದ್ದೀನ್, ದಅವಾ ಕಾರ್ಯದರ್ಶಿಯಾಗಿ ಹಾಫಿಲ್ ಶಫೀಕ್ ಮುಸ್ಲಿಯಾರ್, ರೈಬೋ ಕಾರ್ಯದರ್ಶಿಯಾಗಿ ಮುಹಮ್ಮದ್ ರಾಫಿ ಹಾಗೂ 15 ಮಂದಿ ಸದಸ್ಯರನ್ನು ಆಯ್ಕೆಮಾಡಲಾಯಿತು.
ಎಸ್.ವೈ.ಎಸ್.ನ ನೂತನ ಅಧ್ಯಕ್ಷರಾಗಿ ಅಯ್ಯೂಬ್ ಇಮ್ದಾದಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್, ಕೋಶಾಧಿಕಾರಿಯಾಗಿ ಹಮೀದ್ ನೂಜಿ, ಉಪಾಧ್ಯಕ್ಷರಾಗಿ ಬಶೀರ್ ಬೂಡಿಯಾರ್, ದಅವಾ ಕಾರ್ಯದರ್ಶಿಯಾಗಿ ನೌಶಾದ್ ಸಅದಿ, ಸಾಂತ್ವನ ಕಾರ್ಯದರ್ಶಿಯಾಗಿ ಝುಬೈರ್ ಸಖಾಫಿ ಅವರನ್ನು ಆಯ್ಕೆ ಮಾಡಲಾಯಿತು.
ಕರ್ನಾಟಕ ಮುಸ್ಲಿಮ್ ಜಮಾಅತ್ ನ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಗೌರವಾಧ್ಯಕ್ಷರಾಗಿ ಹಾಜಿ ಅಬೂಬಕರ್ ಮುಸ್ಲಿಯಾರ್, ಅಧ್ಯಕ್ಷರಾಗಿ ಅಬೂಬಕರ್ ಸಾರೆಪುಣಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುರ್ರಹ್ಮಾನ್ ಮದನಿ, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಕುಯ್ಯರ್, ಜೊತೆ ಕಾರ್ಯದರ್ಶಿಯಾಗಿ ಅಲಿ ಅವರನ್ನು ಆಯ್ಕೆ ಮಾಡಲಾಯಿತು.
ವೀಕ್ಷಕರಾಗಿ ಸೆಕ್ಟರ್ ಕಾರ್ಯಕರ್ತರಾದ ಹಾಫಿಲ್ ಅಬ್ದುಸಲಾಂ ನಿಝಾಮಿ ಚೆನ್ನಾರ್, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ರಫೀಕ್ ಪರಾಡ್ ಹಾಗೂ ಶಹೀಮ್ ಅರಿಕ್ಕಿಲ ಭಾಗವಹಿಸಿದ್ದರು. ಇರ್ಷಾದ್ ಗಟ್ಟಮನೆ ಸ್ವಾಗತಿಸಿದರು. ಶರಫುದ್ದೀನ್ ವರದಿ ವಾಚಿಸಿದರು. ಎಸ್.ವೈ.ಎಸ್. ಪ್ರಧಾನ ಕಾರ್ಯದರ್ಶಿ ಹಮೀದ್ ನೂಜಿ ವಂದಿಸಿದರು.