×
Ad

ಸಂತ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗೆ ಸನ್ಮಾನ

Update: 2023-02-25 18:11 IST

ಮಂಗಳೂರು, ಫೆ.25: ಹೊಸದಿಲ್ಲಿಯಲ್ಲಿ ನಡೆದ ಗಣರಾಜೋತ್ಸವ ಪಥಸಂಚಲನದಲ್ಲಿ ಚಿನ್ನದ ಪದಕ ಪಡೆದ ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಪ್ರಶಾಂತ್ ಪರಶುರಾಂ ಕೋಟಿ ಅವರನ್ನು ಕಾಲೇಜಿನ ಆಡಳಿತ ಮಂಡಳಿಯ ವತಿಯಿಂದ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಈ ವೇಳೆ ಶಿಫ್ ಮೋಡ್ಲಿಂಗ್ ಇನ್‌ಸ್ಟ್ರಕ್ಟರ್ ಪರಶುರಾಮ್ ಕೆ, ಕಾಲೇಜಿನ ನಿರ್ದೇಶಕ ಫಾ.ಆಲ್ವಿನ್ ಆರ್. ಡಿಸೋಜ, ಕಾಲೇಜಿನ  ಪ್ರಾಂಶುಪಾಲ ಡಾ.ರಿಯೋ ಡಿಸೋಜ, ಕಾಲೇಜಿನ ಎನ್‌ಸಿಸಿ ನೇವಿ ಸಿಟಿಒ ಪ್ರಮೀಳಾ ಆರ್. ಡಿಸೋಜ, ಪ್ರಶಾಂತ್ ಪರಶುರಾಂ ಕೋಟಿ ಅವರ ಪೋಷಕರಾದ ಪರಶುರಾಂ ಕೋಟಿ ಮತ್ತು ಸೀತಾ ಕೋಟಿ ಉಪಸ್ಥಿತರಿದ್ದರು.

Similar News