×
Ad

ಇತಿಹಾಸವನ್ನು ಮುಂದಿನ ತಲೆಮಾರಿಗೆ ತಿಳಿಸುವ ಪ್ರಯತ್ನ-ಸಚಿವ ಎಸ್.ಅಂಗಾರ

ಬೆಳ್ಳಾರೆಯಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಸ್ಮಾರಕ ನಿರ್ಮಾಣಕ್ಕೆ ಶಿಲಾನ್ಯಾಸ

Update: 2023-02-25 20:00 IST

ಸುಳ್ಯ: ತಾಲೂಕಿನ ಬೆಳ್ಳಾರೆ ಬಂಗ್ಲೆಗುಡ್ಡೆಯಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮದ ಸ್ಮಾರಕ ನಿರ್ಮಾಣಕ್ಕೆ ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್.ಅಂಗಾರ ಶನಿವಾರ ಶಿಲಾನ್ಯಾಸ ನೆರವೇರಿಸಿದರು. 

ಇತಿಹಾಸವನ್ನು ಮುಂದಿನ ತಲೆಮಾರಿಗೆ ತಿಳಿಸುವ ನಿಟ್ಟಿನಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲಾಗುತ್ತದೆ. ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯ ಹೋರಾಟದ ಸ್ವಾಭಿಮಾನದ ಸಂಕೇತವಾಗಿ,ಮತ್ತು ಹಿರಿಯರ ತ್ಯಾಗದ ಪ್ರತೀಕವಾಗಿ ಸ್ಮಾರಕ ತಲೆ ಎತ್ತಲಿದೆ.ಬ್ರಿಟೀಷರ ಕಾಲದ ಖಜಾನೆ ಕಟ್ಟಡವನ್ನು ನವೀಕರಿಸಿ ಹಾಗೆಯೇ ಉಳಿಸಲಾಗುವುದು.24 ಅಡಿ ಎತ್ತರದ ಮುಷ್ಠಿ ರೂಪದ ಸ್ಮಾರಕ ಸ್ತಂಭ, ಆಡಿಟೋರಿಯಂ, ಉದ್ಯಾನ, ಅತಿಥಿ ಗೃಹ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳು ನಡೆಯಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಪನ್ನೆ, ಉಪಾಧ್ಯಕ್ಷೆ ಗೌರಿ ನೆಟ್ಟಾರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ಯಾಮಪ್ರಸಾದ್ ಯಂ.ಆರ್, ಅಮರ ಸುಳ್ಯ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ.ಪ್ರಭಾಕರ ಶಿಶಿಲ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ವೀಣಾ ಎಂ.ಟಿ.,ಪ್ರಮುಖರಾದ ಆರ್.ಕೆ.ಭಟ್ ಕುರುಂಬುಡೇಲು, ಶ್ರೀರಾಮ ಪಾಟಾಜೆ, ಅನಿಲ್ ರೈ, ಎನ್.ಎಸ್.ಡಿ.ವಿಠಲದಾಸ್, ತಾ.ಪಂ.ಅಧೀಕ್ಷಕಿ ಜಯಲಕ್ಷ್ಮಿ, ಸಂಜೀವಿನಿ ಒಕ್ಕೋಟದ ಅಧ್ಯಕ್ಷೆ ಗುಣವತಿ ಗ್ರಾ.ಪಂ.ಸದಸ್ಯರು ಹಾಗೂ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Similar News