ಬಂಟ್ವಾಳ: ಒಣ ಹುಲ್ಲು ಸಾಗಾಟದ ಲಾರಿ ಬೆಂಕಿಗಾಹುತಿ
Update: 2023-02-26 14:52 IST
ಬಂಟ್ವಾಳ: ಹಾಸನದಿಂದ ಮಂಗಳೂರು ಕಡೆಗೆ ಆಗಮಿಸುತ್ತಿದ್ದ ಒಣ ಹುಲ್ಲು ಸಾಗಾಟದ ಲಾರಿಯೊಂದಕ್ಕೆ ಬೆಂಕಿ ತಗಲಿ ಹೊತ್ತಿ ಉರಿದ ಘಟನೆ ರವಿವಾರ ಮುಂಜಾನೆ ಕಲ್ಲಡ್ಕ ಸಮೀಪದ ದಾಸಕೋಡಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಲಾರಿಯು ಹೆದ್ದಾರಿಯಲ್ಲಿ ಆಗಮಿಸುತ್ತಿರುವ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ಬಂಟ್ವಾಳ ಅಗ್ನಿಶಾಮಕ ಠಾಣೆಯವರು ಘಟನಾ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಿಂದ ಲಾರಿ ಸುಟ್ಟು ಕರಕಲಾಗಿದ್ದು, ನಷ್ಟ ಉಂಟಾಗಿದೆ.