ಕುಂದಾಪುರ: 18ನೇ ಹಂತದ ಸ್ವಚ್ಛ ಕಡಲತೀರ-ಹಸಿರು ಕೋಡಿ ಅಭಿಯಾನ
ಕುಂದಾಪುರ, ಫೆ.26: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಪ್ರತಿ ತಿಂಗಳ ಕೊನೆಯ ಭಾನುವಾರದಂದು ನಡೆಯುವ ಸ್ವಚ್ಛ ಕಡಲತೀರ-ಹಸಿರು ಕೋಡಿ ಅಭಿಯಾನದ 18 ನೇ ಹಂತ ಕಾರ್ಯಕ್ರಮವು ಫೆ.26ರಂದು ನಡೆಯಿತು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯ ಅಬೂಬಕರ್ ಸಿದ್ದೀಕ್ ಬ್ಯಾರಿ ಮಾತನಾಡಿ, ಸಂಸ್ಥೆಯ ಸಂಚಾಲಕ ಸೈಯದ್ ಮೊಹಮ್ಮದ್ ಬ್ಯಾರಿ ಅವರ ಆಶಯದಂತೆ ಪ್ರತಿ ತಿಂಗಳು ನಡೆಯುತ್ತಿರುವ ಈ ಸ್ವಚ್ಛತಾ ಅಭಿಯಾನಕ್ಕೆ ದೇವರ ಅನುಗ್ರಹ ಇದೆ. ಆದುದರಿಂದ ರಾಜ್ಯ ಮಟ್ಟದಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಶಿಕ್ಷಣ, ಶಾಲಾ ಕಟ್ಟಡಗಳ ವಿನ್ಯಾಸ, ಸಮಾಜ ಸೇವೆ ಮತ್ತು ಸಮಾಜದಲ್ಲಿ ಇರುವ ಬಡವರ ಸೇವೆ ಮುಂತಾದ ಅಂಶಗಳ ಆಧಾರದ ಮೇಲೆ ನೀಡಲ್ಪಡುವ ಬೆಸ್ಟ್ ಸಿಆರ್‌ಎಸ್ ಅಕ್ಟಿವಿಟಿ ಪ್ರಶಸ್ತಿ ನಮ್ಮ ಬ್ಯಾರೀಸ್ ಗ್ರೂಪ್‌ಗೆ ಲಭಿಸಿದೆ. ಈ ಪ್ರಶಸ್ತಿಯ ನಿಜವಾದ ಕಾರಣಕರ್ತರು ವಿದ್ಯಾರ್ಥಿಗಳು. ಇದು ನಿಮಗೆ ಸಲ್ಲಬೇಕಾದುದು ಎಂದರು.
ನಂತರ ಕೋಡಿ ಕಡಲತೀರ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಈ 18ನೇ ಸ್ವಚ್ಛತಾ ಅಭಿಯಾನದಲ್ಲಿ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕ-ಶಿಕ್ಷಕೇತರರು, ವಿದ್ಯಾರ್ಥಿ ಗಳು, ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು, ಊರಿನ ಗಣ್ಯರು ಹಾಗೂ ಪರಿಸರ ಪ್ರಿಯರು ಬಹು ಉತ್ಸಾಹದಿಂದ ಪಾಲ್ಗೊಂಡರು.
ಈ ಸ್ವಚ್ಛತೆಯ ಪವಿತ್ರ ಕಾಯಕದಲ್ಲಿ ಸಹಕಾರ ನೀಡುತ್ತಿರುವ ಕುಂದಾಪುರ ಪುರಸಭೆಯ ಅಧ್ಯಕ್ಷರು, ಮುಖ್ಯಾಧಿಕಾರಿಗಳು, ಸದಸ್ಯರು ಹಾಗೂ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸರ್ವಸದಸ್ಯರು, ಸಿಬ್ಬಂದಿಗಳು ಹಾಗೂ ಪಾಲ್ಗೊಂಡ ಸರ್ವರಿಗೂ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ. ಕೆ.ಎಂಅಬ್ದುಲ್ ರೆಹಮಾನ್ ಅಭಿನಂದನೆ ಸಲ್ಲಿಸಿದರು.