ಬಾರ್ಕೂರಿನಲ್ಲಿ ಚಿರತೆ ಕಾಟ: ಸಾಕು ನಾಯಿ ಬಲಿ
Update: 2023-02-26 22:15 IST
ಬ್ರಹ್ಮಾವರ: ಬಾರ್ಕೂರಿನ ಹೊಸಾಳ ಗ್ರಾಮದಲ್ಲಿ ಚಿರತೆಯ ದಾಳಿಗೆ ಸಾಕು ನಾಯಿಯೊಂದು ಬಲಿಯಾಗಿರುವ ಬಗ್ಗೆ ವರದಿಯಾಗಿದೆ.
ಸೀತಾ ಪೂಜಾರ್ತಿ ಎಂಬವರ ಸಾಕು ನಾಯಿಯನ್ನು ಮನೆಯಂಗಳದಲ್ಲಿ ಚಿರತೆ ಬೇಟೆಯಾಡಿದೆ. ನಾಯಿಯ ಕೆಲವು ಅಂಗಾಂಗಳಾದ ಕಾಲು, ದೇಹದ ಇತರ ಭಾಗ ಅಲ್ಲಿಯೇ ಬಿಟ್ಟು ಹೋಗಿದೆ. ಬಾರ್ಕೂರು ಪ್ರದೇಶದಲ್ಲಿ ಚಿರತೆ ಸಂಚಾರ ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ.