×
Ad

ಬಂಟ್ವಾಳ | ಕೆಂಪುಗುಡ್ಡೆಯಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ

Update: 2023-02-27 15:40 IST

ಬಂಟ್ವಾಳ, ಫೆ.27: ತಾಲೂಕಿನ ಕೆಂಪುಗುಡ್ಡೆಯ ಮನೆಯೊಂದರ ಅಂಗಳದಲ್ಲಿ ಚಿರತೆಯೊಂದು ಓಡಾಡುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಇಲ್ಲಿನ ನಿವಾಸಿ ಅಬ್ರಹಾಂ ವರ್ಗೀಸ್ ಎಂಬವರ ಮನೆಯಂಗಳದಲ್ಲಿ ಚಿರತೆ ಬಂದು ಹೋಗುವ ದೃಶ್ಯ ಕಂಡುಬಂದಿದೆ. ಈ ದೃಶ್ಯದ ಪೂಟೇಜ್ ಸಹಿತ ಅರಣ್ಯ ಇಲಾಖೆಗೆ ದೂರು ನೀಡಿರುವ ಗ್ರಾಮಸ್ಥರು, ಚಿರತೆಯನ್ನು ಸೆರೆ ಹಿಡಿಯುವಂತೆ ಮನವಿ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಇಲ್ಲಿನ ಕೆಲವು ಮನೆಯ ನಾಯಿಗಳು ಕಾಣೆಯಾಗಿದ್ದು, ಚಿರತೆ ತಿಂದಿರುವ ಸಂಶಯ ವ್ಯಕ್ತವಾಗಿದೆ.

ಹಾಗಾಗಿ ಚಿರತೆಯನ್ನು ಹಿಡಿದು, ಈ ಭಾಗದ ಜನರ ಆತಂಕವನ್ನು ದೂರ ಮಾಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

Similar News