×
Ad

ಬಜಾಲ್: ಸ್ವಲಾತ್ ವಾರ್ಷಿಕ ಸಮಾರೋಪ

Update: 2023-02-27 21:26 IST

ಮಂಗಳೂರು : ಬಜಾಲ್ ನಂತೂರಿನ ಬದ್ರಿಯಾ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸದ ವತಿಯಿಂದ ರವಿವಾರ  ಸ್ವಲಾತ್ ವಾರ್ಷಿಕ ಮತ್ತು ಸಮಾರೋಪ ಸಮಾರಂಭ ಮಸೀದಿಯ ವಠಾರದಲ್ಲಿ ಜರಗಿತು.

ಈ ಸಂದರ್ಭ ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುನ್ನಾಸಿರ್ ಲಕ್ಕಿಸ್ಟಾರ್ ಅವರನ್ನು ಸನ್ಮಾನಿಸಲಾಯಿತು. ಮಸೀದಿಯ ಅಧ್ಯಕ್ಷ ಅಬ್ದುಲ್ ರವೂಫ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಜಮಾಅತ್ ಕಮಿಟಿಯಡಿ ಆಂಗ್ಲ ಮಾಧ್ಯಮ ಶಾಲೆ, ಹೈಯರ್ ಸೆಕೆಂಡರಿ ಮದ್ರಸವನ್ನು ಸ್ಥಾಪಿಸಲಾಗಿದೆ.  ಸುಮಾರು 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ,  ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಎಂ.ಆರ್. ರಶೀದ್ ಹಾಜಿ ಮಾತನಾಡಿದರು. ಬಿಜೆಎಂ ಖತೀಬ್ ಪಿ.ಎಸ್.ಮುಹಮ್ಮದ್ ಕಾಮಿಲ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಹಾಜಿ ಶಾಕಿರ್ ಅಹ್ಮದ್ ಐಸಮ್, ಮರ್ಕಝ್ ಕಾರ್ಯದರ್ಶಿ ಮುಹಮ್ಮದ್ ಹಾಜಿ ಸಾಗರ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯ ಝೈನುದ್ದೀನ್, ಕಾರ್ಪೊರೇಟರ್ ಕೆ.ಇ.ಅಶ್ರಫ್, ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರಿಕ ಸಂಘದ ಉಪಾಧ್ಯಕ್ಷ ಅಹ್ಮದ್ ಬಾವ, ಹಾಜಿ ಬಿ.ಎನ್.ಅಬ್ಬಾಸ್, ಎಚ್.ಎಸ್. ಹನೀಫ್, ಎಂ.ಎಚ್. ಮುಹಮ್ಮದ್ ಫೈಸಲ್ ನಗರ, ಅಶ್ರಫ್ ತೋಟ, ಇಕ್ಬಾಲ್ ಅಹ್ಸನಿ, ಅಬ್ದುಲ್ ಸಲಾಂ, ಹಕೀಂ ಮದನಿ, ಅಬ್ದುಲ್ ರಹಿಮಾನ್ ಮದನಿ, ಅಬೂಬಕ್ಕರ್ ಸಖಾಫಿ, ಅಬ್ದುಲ್ ಹಮೀದ್, ಮುಹಮ್ಮದ್ ಹನೀಫ್ ಕೆಳಗಿನಮನೆ, ಹಸನಬ್ಬ ಮೋನು, ಯೂಸುಫ್ ಕುಂಬ್ಳಳಿಕೆ, ಅಬ್ಬಾಸ್ ಶಾಂತಿನಗರ, ಅಬ್ದುಲ್ ರವೂಫ್ ಫೈಸಲ್ ನಗರ, ನಝೀರ್ ಪಾಂಡೇಲ್, ಮುಹಮ್ಮದ್ ಹನೀಫ್ ಬೈಕಂಪಾಡಿ ಉಪಸ್ಥಿತರಿದ್ದರು.

ಸ್ವಲಾತ್ ಮಜ್ಲಿಸ್‌ಗೆ ಅಸ್ಸಯ್ಯದ್ ಅಬೂಬಕ್ಕರ್ ಸಿದ್ದೀಕ್ ತಂಳ್ ಮುರ ನೇತೃತ್ವ ನೀಡಿ ದುಆ ನೆರವೇರಿಸಿದರು. ಹಯಾತುಲ್ ಇಸ್ಲಾಂ ಮದ್ರಸದ ಸದರ್ ಮುಅಲ್ಲಿಂ ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

Similar News