×
Ad

‘ನಮ್ಮ ಪಾವೂರು’ ಕೃತಿ ಬಿಡುಗಡೆ, ವಾಲಿಬಾಲ್ ಪಂದ್ಯಾಟ

Update: 2023-02-27 21:32 IST

ಮಂಗಳೂರು: ದ.ಕ. ಜಿಲ್ಲೆಯ ಪ್ರತಿಯೊಂದು ಗ್ರಾಮಗಳೂ ವೈಶಿಷ್ಟ್ಯತೆಯಿಂದ ಕೂಡಿದ್ದು ಈ ಬಗ್ಗೆ ದಾಖಲೀಕರಣ ಅಗತ್ಯ ಎಂದು ಪತ್ರಕರ್ತ ಗುರುವಪ್ಪಬಾಳೇಪುಣಿ ಅಭಿಪ್ರಾಯಪಟ್ಟರು.

ಪಾವೂರು ಗ್ರಾಪಂ ಹಿರಿಯ ಸದಸ್ಯೆಯಾಗಿದ್ದ ರುಫಿನ್ ಲೂವೀಸ್ ಸ್ಮರಣಾರ್ಥ ಇನೋಳಿ ಕಂಬಳಪದವು ಪಲ್ಲ ಮೈದಾನದಲ್ಲಿ ರವಿವಾರ ನಡೆದ ವಾಲಿಬಾಲ್ ಲೀಗ್ ಪಂದ್ಯಾಟ ಹಾಗೂ ಗ್ರಾಮದ ಇತಿಹಾಸ ಸಾರುವ ‘ನಮ್ಮ ಪಾವೂರು’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಇಂದು ಅನ್ನದ ಬಟ್ಟಲು ವಿಷವಾಗುತ್ತಿದೆ, ನೈತಿಕತೆ ಹೇಳುವವರನ್ನು ತೆಗಳಲಾಗುತ್ತಿದೆ. ಜಾತಿ, ಧರ್ಮ, ಸಮುದಾಯಗಳ ವೈಮನಸ್ಸಿನ ನಡುವೆ ಪಾವೂರು ಗ್ರಾಮ ಕೃತಿ ಮತ್ತು ಕಾರ್ಯಕ್ರಮವು ಕೂಡು ಕುಟುಂಬ ನೆನಪಿಸಿದೆ. ಇದು ಗ್ರಾಮಕ್ಕೆ ಸಿಕ್ಕ ಗೌರವ, ಮುಂದಿನ ಪೀಳಿಗೆಗೆ ಒಳ್ಳೆಯದನ್ನು ತಿಳಿಸುವ ಕಾರ್ಯ ನಡೆಯಬೇಕಿದ್ದು, ಪ್ರತೀ ಗ್ರಾಮದ ಬಗ್ಗೆಯೂ ಇಂತಹ ಕೃತಿ ಹೊರಬರಬೇಕು ಎಂದು ತಿಳಿಸಿದರು.

ಉಳ್ಳಾಲ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ತ್ಯಾಗಂ ಹರೇಕಳ ವಾಲಿಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ಪಜೀರ್ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಮ್ಯಾಕ್ಸಿಂ ಫರ್ನಾಂಡೀಸ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕಮರುನ್ನಿಸಾ ಅಧ್ಯಕ್ಷತೆ ವಹಿಸಿದ್ದರು.

ಗ್ರಾಪಂ ಉಪಾಧ್ಯಕ್ಷ ಮುಹಮ್ಮದ್ ಅನ್ಸಾರ್ ಮಾತನಾಡಿ ಗ್ರಾಮದ ಒಂದಿಬ್ಬರ ವಿಚಾರ ತಿಳಿಯುವುದೇ ಕಷ್ಟ, ಹೀಗಿರುವಾಗ 129 ಸಾಧಕರ ಸಹಿತ ಗ್ರಾಮದ ಇತಿಹಾಸವನ್ನೇ ಕೃತಿ ರೂಪದಲ್ಲಿ ದಾಖಲೆಯನ್ನಾಗಿಸಿದ ಪತ್ರಕರ್ತರ ಶ್ರಮ ಶ್ಲಾಘನೀಯ, ಈ ಕೃತಿ ಪ್ರತಿಯೊಬ್ಬರ ಮನೆಯಲ್ಲೂ ಇರಬೇಕು ಎಂದರು.

ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಮಂಗಳೂರು ತಾಪಂ ಮಾಜಿ ಸದಸ್ಯ ಮುಸ್ತಫಾ ಮಲಾರ್, ಪಾವೂರು ಗ್ರಾಪಂ ಮಾಜಿ ಸದಸ್ಯ ಜಯರಾಮ ಆಳ್ವ ಪೋಡಾರ್, ಮಂಗಳೂರು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಶಂಕರಾನಂದ ಎನ್. ಇನವಳ್ಳಿ, ಹರೇಕಳ ಗ್ರಾಪಂ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಮಾತನಾಡಿದರು.

ಗ್ರಾಪಂ ಮಾಜಿ ಉಪಾಧ್ಯಕ್ಷ ದುಗ್ಗಪ್ಪಪೂಜಾರಿ, ಗ್ರಾಪಂ ಸದಸ್ಯರಾದ ರಿಝ್ವಾನ್ ಮಲಾರ್, ಸಾತ್ಕೋ ಮಜೀದ್, ಇಕ್ಬಾಲ್ ಇನೋಳಿ, ಮಮತಾ, ರಿಯಾಝ್ ಗಾಡಿಗದ್ದೆ, ಖತೀಜಾ ಲತೀಫ್, ಕಾರ್ಯಕ್ರಮ ಸಂಘಟಕರಾದ ಅಶ್ಫಾಕ್ ಇನೋಳಿ ಕಾನ, ನಝೀರ್ ಟಿ.ಎಚ್., ಇವನ್ ಎಲ್ರೋಯ್ ಮೆಂಡೋನ್ಸ ಮತ್ತಿತರರು ಉಪಸ್ಥಿತರಿದ್ದರು.
ಸಂಘಟಕ ವಲೇರಿಯನ್ ಡಿಸೋಜ ಸ್ವಾಗತಿಸಿದರು. ಪತ್ರಕರ್ತ ಹಂರ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ರಂ ಇನೋಳಿ ಸನ್ಮಾನ ಪತ್ರ ವಾಚಿಸಿದರು. ಸಂಘಟಕ, ಉದ್ಯಮಿ ರೊನಾಲ್ಡ್ ಡಿಸೋಜ ವಂದಿಸಿದರು. ಪತ್ರಕರ್ತ ಅನ್ಸಾರ್ ಇನೋಳಿ ಕಾರ್ಯಕ್ರಮ ನಿರೂಪಿಸಿದರು.

ಗ್ರಾಮಸ್ಥರ ಸೇವೆಗೆ ಆಂಬ್ಯುಲೆನ್ಸ್

ಕೃತಿ ಬಿಡುಗಡೆ ಹಾಗೂ ವಾಲಿಬಾಲ್ ಪಂದ್ಯಾಟದ ನೆನಪಿಗಾಗಿ ರುಫಿನ್ ಲೂವೀಸ್ ಅವರ ಸ್ಮರಣಾರ್ಥ ಅವರ ಪುತ್ರರಾದ ವಲೇರಿಯನ್ ಡಿಸೋಜ ಮತ್ತು ರೊನಾಲ್ಡ್ ಡಿಸೋಜ ಸಾರ್ವಜನಿಕರ ಸೇವೆಗೆ ಆ್ಯಂಬುಲೆನ್ಸ್ ಕೊಡುಗೆ ಘೋಷಿಸಿದರು. ಆ್ಯಂಬುಲೆನ್ಸ್ ಸೇವೆ ಗ್ರಾಮವನ್ನು ಕೇಂದ್ರೀಕರಿಸಿ ಕಾರ್ಯಾಚರಣೆ ನಡೆಸಲಿದೆ. ಪಾವೂರು, ಬೋಳಿಯಾರ್, ಪಜೀರ್, ಹರೇಕಳ, ಕೊಣಾಜೆ ಗ್ರಾಮಸ್ಥರಿಗೂ ತುರ್ತು ಸೇವೆ ನೀಡಲಿದೆ. ನಿರ್ವಹಣೆ ನಿಟ್ಟಿನಲ್ಲಿ ಸಮಿತಿ ರಚನೆಯಾಗಲಿದೆ ಎಂದು ಪ್ರಕಟಿಸಿದರು.

Similar News