ಬಂಟ್ವಾಳ| ಗ್ರಾಪಂ ಉಪಚುನಾವಣೆ: ಅನಂತಾಡಿ ಕಾಂಗ್ರೆಸ್, ನೆಟ್ಲ ಮುಡ್ನೂರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು
ಬಂಟ್ವಾಳ: ವಿವಿಧ ಕಾರಣಗಳಿಂದ ತೆರವಾದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನಂತಾಡಿ ಮತ್ತು ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ನ ತಲಾ ಒಂದು ಸ್ಥಾನಗಳಿಗೆ ಫೆ 25 ರಂದು ನಡೆದ ಉಪ ಚುನಾವಣೆಯ ಮತ ಎಣಿಕೆ ಬಂಟ್ವಾಳ ಆಡಳಿತ ಸೌಧದಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿದ್ದು, ಅನಂತಾಡಿ ಗ್ರಾಮ ಪಂಚಾಯತ್ ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಶಿಕಲಾ ಹಾಗೂ ನೆಟ್ಲ ಮುಡ್ನೂರು ಪಂಚಾಯತ್ ನ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಜಾತ ಗೆಲುವು ಸಾಧಿಸಿದ್ದಾರೆ.
ಅನಂತಾಡಿ ಗ್ರಾಮ ಪಂಚಾಯತ್ ನ ಒಟ್ಟು 667 ಮತದಾರರ ಪೈಕಿ 500 ಮಂದಿ ಮತ ಚಲಾಯಿಸಿದ್ದರು. ಈ ಪೈಕಿ ಶಶಿಕಲಾ (ಕಾಂಗ್ರೆಸ್) 254, ಗೀತಾ ಚಂದ್ರ ಶೇಖರ್ (ಬಿಜೆಪಿ) 242 ಮತಗಳನ್ನು ಪಡೆದಿದ್ದಾರೆ. 4 ಮತಗಳು ತಿರಸ್ಕೃತಗೊಂಡಿದೆ. ಕಳೆದ ಬಾರಿ ಬಿಜೆಪಿ ತೆಕ್ಕೆಯಲ್ಲಿದ್ದ ಈ ಸ್ಥಾನವನ್ನು 12 ಮತ ಅಂತರದಲ್ಲಿ ಕಾಂಗ್ರೆಸ್ ಕೈವಶ ಮಾಡಿಕೊಂಡಿದೆ.
ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ನ ಒಟ್ಟು 816 ಮತದಾರರ ಪೈಕಿ 596 ಮಂದಿ ಮತ ಚಲಾಯಿಸಿದ್ದರು. ಈ ಪೈಕಿ ಸುಜಾತ ಜಗದೀಶ ಪೂಜಾರಿ (ಬಿಜೆಪಿ) 353, ಹರಿಣಾಕ್ಷಿ (ಕಾಂಗ್ರೆಸ್) 239 ಮತಗಳನ್ನು ಪಡೆದಿದ್ದಾರೆ. 4 ಮತಗಳು ತಿರಸ್ಕೃತಗೊಂಡಿದೆ. ಕಳೆದ ಬಾರಿ ಬಿಜೆಪಿ ತೆಕ್ಕೆಯಲ್ಲಿದ್ದ ಈ ಸ್ಥಾನವನ್ನು 114 ಮತ ಅಂತರದಲ್ಲಿ ಮತ್ತೆ ಬಿಜೆಪಿ ಉಳಿಸಿಕೊಂಡಿದೆ.