ಕರ್ನಾಟಕ ರಾಜ್ಯ ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆ: ದ.ಕ. ಜಿಲ್ಲಾ ಮಟ್ಟದ ದ್ವಿತೀಯ ಸಮಾವೇಶ

Update: 2023-02-28 11:20 GMT

ವಿಟ್ಲ: ಸರಕಾರಿ ಶಾಲೆಗಳು ಸಮಸ್ಯೆಗಳ ನಡುವೆ ಮುನ್ನಡೆಯುತ್ತಿದೆ.  ಸರಕಾರಿ ಶಾಲೆಗಳನ್ನು ಉಳಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಸರಕಾರಿ ಶಾಲೆಗಳಲ್ಲಿ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ಮನೋಭಾವನೆ ಇದೆ. ಎಲ್ಲರೂ ಜತೆಯಲ್ಲಿ ಕೆಲಸ ಮಾಡಿದಾಗ ಶಾಲೆಗಳು ಉಳಿಸಲು ಸಾಧ್ಯವಾಗುತ್ತದೆ. ಹೆಣ್ಮುಕ್ಕಳಿಗೆ ತೊಂದರೆ ಆದಾಗ ಠಾಣೆಗೆ ದೂರು ಮಾತ್ರ ನೀಡುವುದು ಅವಶ್ಯಕತೆ ಇಲ್ಲ. ಪ್ರಾಧಿಕಾರದ ಮೂಲಕ ದೂರ ಸಲ್ಲಿಸಬಹುದು ಎಂದು ದ. ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ. ಹೇಳಿದರು.

ಅವರು ಮಂಗಳವಾರ ನೇರಳಕಟ್ಟೆ ಜನಪ್ರೀಯ ಗಾರ್ಡನ್ ನಲ್ಲಿ ಕರ್ನಾಟಕ ರಾಜ್ಯ ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆ ದ.ಕ. ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಎಸ್.ಡಿ.ಎಂ.ಸಿ.ಯ 21ನೇ ವರ್ಷಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಕ್ರೀಯಾಶೀಲ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ದ.ಕ. ಜಿಲ್ಲಾ ಮಟ್ಟದ ದ್ವಿತೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ವಿ.ಪಿ. ಮಾತನಾಡಿ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳು ವಂಚಿತವಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯಲ್ಕಿ ಉಲ್ಲೇಖಿಸಿದ ಸೌಲಭ್ಯಗಳು ದೊರೆತ್ತಿಲ್ಲ. ಸರಕಾರಿ ಶಾಲೆಗಳು ಉಳಿಯ ಬೇಕಾದರೆ ಶಿಕ್ಷಕರು ಬೇಕು. ಮೂರು ವರ್ಷಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆ ಇದೆ. ಇಡೀ ದೇಶದಲ್ಲಿ  ಕರ್ನಾಟಕದಲ್ಲಿ ಶಿಕ್ಷಕರ ಹುದ್ದೆ ಖಾಲಿ ಇದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಜಿಲ್ಲಾ ಸಮಾವೇಶ ಸಂಚಾಲಕ ಚಂದ್ರಶೇಖರ್ ಕೊಂಕಣಾಜೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ನಿವೃತ್ತ ಕಾರ್ಯದರ್ಶಿ ಎ.ಬಿ. ಇಬ್ರಾಹಿಂ,  ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಅಕ್ಷರ ದಾಸೋಹ ಸಮಸ್ವಯಾಧಿಕಾರಿ ಉಷಾ,  ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆ ರಾಜ್ಯಧ್ಯಕ್ಷ ಮೊಯಿದಿನ್ ಕುಟ್ಟಿ,  ಮಾಮಚ್ಚನ್, ಬೆಳ್ತಂಗಡಿ ಸಿಆರ್ ಪಿ ಆರತಿ, ಧಾರಾವಾಡ ಜಿಲ್ಲಾಧ್ಯಕ್ಷ ಈರಣ್ಣ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ವಿಜಯಕುಮಾರ್, ಕೊಡಗು ಜಿಲ್ಲಾಧ್ಯಕ್ಷ ನಾಗೇಶ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಅಶೋಕ್, ಜನಪ್ರಿಯ ಗಾರ್ಡನ್ ನ ಉಸ್ತುವಾರಿ  ಹಾಜಿ ಇಸ್ಮಾಯಿಲ್ ವಿ.ಕೆ,  ಮತ್ತಿತರರು ಉಪಸ್ಥಿತರಿದ್ದರು. ನೌಫಲ್ ಕೆಬಿಎಸ್ ಕುಡ್ತಮುಗೇರು ನಿರೂಪಿಸಿದರು.

ಎಸ್ಡಿಎಂಸಿ ಸಮನ್ವಯ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ರಾಜೇಶ್ವರಿ ಉಬರಡ್ಕ ಸ್ವಾಗತಿಸಿದರು. ಎಸ್ಡಿಎಂಸಿ ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ನೆಲ್ಯಾಡಿ ವಂದಿಸಿದರು.

Similar News