ಬಡಗ ಬೆಳ್ಳೂರು: ಗ್ರಾಮ ಸಮುದಾಯ ಜಾಗೃತಿ ಕಾರ್ಯಕ್ರಮ ಸಂಪನ್ನ
ಮಂಗಳೂರು, ಫೆ.28: ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರು ಗ್ರಾಮದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮನ್ವಯದಲ್ಲಿ ಎಚ್‌ಪಿಸಿಎಲ್‌ನ ಎಲ್‌ಪಿಜಿ ಪೈಪ್‌ಲೈನ್ ಮತ್ತು ಪೆಟ್ರೋನೆಟ್ ಎಂಎಚ್‌ಬಿ ಪೈಪ್‌ಲೈನ್ ಜಂಟಿ ಆಫ್‌ಸೈಟ್ ತುರ್ತು ಅಣಕು ಕಾರ್ಯಾಚರಣೆ ಮತ್ತು ಗ್ರಾಮ ಸಮುದಾಯ ಜಾಗೃತಿ ಕಾರ್ಯಕ್ರಮವು ಮಂಗಳವಾರ ನಡೆಯಿತು.
ಕಾರ್ಖಾನೆಗಳ ಉಪನಿರ್ದೇಶಕ ಡಾ. ರಾಜೇಶ್ ಮಿಸ್ತ್ರಿಕೋಟಿ, ಜಿಲ್ಲಾ ವಿಪತ್ತು ನಿರ್ವಹಣಾ ಡಿಡಿಎಂಎ ವಿಜಯ್ ಕುಮಾರ್ ಪೂಜಾರ್, ಡಿಎಫ್‌ಒ ಭರತ್ ಕುಮಾರ್, ಆರೋಗ್ಯಾಧಿಕಾರಿ ಶಿವಕುಮಾರ್ ಮತ್ತಿತರ ಸ್ಥಳೀಯ ಆಡಳಿತ ಮತ್ತು 200ಕ್ಕೂ ಹೆಚ್ಚಿನ ಗ್ರಾಮಸ್ಥರು ಭಾಗವಹಿಸಿದ್ದರು.
ಎಚ್‌ಪಿಸಿಎಲ್, ಎಲ್‌ಪಿಜಿ ಪೈಪ್‌ಲೈನ್‌ನ ಜಿ.ಎಂ. ಜಿ. ವಿನೋದ್ ಕುಮಾರ್ ಅವರು ಎಚ್.ಪಿ.ಸಿ.ಎಲ್, ಎಲ್‌ಪಿಜಿ ಪೈಪ್‌ಲೈನ್ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ನೀಡಿದರು. ಪೈಪ್‌ಲೈನ್‌ನ ಸನ್ನದ್ಧತೆ ಮತ್ತು ಎಲ್‌ಪಿಜಿ ಸೋರಿಕೆ ಸಂಬಂಧಿತ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಎಚ್‌ಪಿಸಿಎಲ್‌ನೊಂದಿಗೆ ಲಭ್ಯವಿರುವ ಅತ್ಯಾಧುನಿಕ ಉಪಕರಣಗಳ ಬಗ್ಗೆ ತಿಳಿಸಿದರು. ಟೋಲ್ ಫ್ರೀ ನಂ.18001801276 ಮೂಲಕ ಪೈಪ್‌ಲೈನ್‌ನಲ್ಲಿ ಯಾವುದೇ ತುರ್ತು ಸಂದರ್ಭ ಪೈಪ್‌ಲೈನ್ ನಿಯಂತ್ರಣ ಕೊಠಡಿಯನ್ನು ತಲುಪಲು ಪೈಪ್‌ಲೈನ್ ಆರ್‌ಒಯು ಉದ್ದಕ್ಕೂ ಇರುವ ಎಲ್ಲಾ ಎಚ್ಚರಿಕೆ ಫಲಕಗಳಲ್ಲಿ ಲಭ್ಯವಿದೆ ಎಂದರು.