×
Ad

ದ.ಕ. ಇಂಟಕ್ ಜಿಲ್ಲಾಧ್ಯಕ್ಷರಾಗಿ ಚಿತ್ತರಂಜನ್ ಶೆಟ್ಟಿ ಬೊಂಡಾಲ ನೇಮಕ

Update: 2023-02-28 19:47 IST

ಮಂಗಳೂರು, ಫೆ.28: ಇಂಟಕ್ ಘಟಕದ ದ.ಕ. ಜಿಲ್ಲಾಧ್ಯಕ್ಷರಾಗಿ ಚಿತ್ತರಂಜನ್ ಶೆಟ್ಟಿ ಬೊಂಡಾಲ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಇಂಟಕ್ ವಿಭಾಗದ ಅಧ್ಯಕ್ಷ ಡಾ.ಜಿ. ಸಂಜೀವ್ ರೆಡ್ಡಿಯ ಆದೇಶ, ರಾಷ್ಟ್ರೀಯ ಇಂಟಕ್ ವರಿಷ್ಠ ಎನ್.ಎಂ.ಅಡ್ಯಂತಾಯರ ಅವರ ಶಿಫಾರಸು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರ ಅನುಮೋದನೆ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್‌ರ ಅನುಮತಿ ಮೇರೆಗೆ ನೇಮಿಸಲಾಗಿದೆ.

ಚಿತ್ತರಂಜನ್ ಶೆಟ್ಟಿ ಈ ಹಿಂದೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ, ಜಿಲ್ಲಾ ಸೇವಾದಳದ ಕಾರ್ಯದರ್ಶಿ,  ಬಂಟ್ವಾಳ ಇಂಟಕ್ ಕಾರ್ಯದರ್ಶಿ,  ಜಿಲ್ಲಾ ಇಂಟಕ್ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಸಂಯೋಕರಾಗಿ  ಸೇವೆ ಸಲ್ಲಿಸಿದ್ದಾರೆ.

Similar News