ಮಾ.3: ವಿಶ್ವ ಶ್ರವಣ ದಿನ
Update: 2023-02-28 19:55 IST
ಮಂಗಳೂರು, ಫೆ.28: ವಿಶ್ವ ಶ್ರವಣ ದಿನವನ್ನು ಮಾ.3ರಂದು ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿರುವ ಜಿಲ್ಲಾ ಪುನರ್ವಸತಿ ಕೇಂದ್ರದಲ್ಲಿ ಆಚರಿಸಲಾಗುವುದು.
ಈ ಸಂದರ್ಭ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯಡಿ ಶ್ರವಣ ಸಾಧನಗಳನ್ನು ವಿತರಿಸಲಾಗು ವುದು. ವಯಸ್ಸಾದವರ ಮತ್ತು ಮಕ್ಕಳ ಕಿವಿ ಕೇಳುವಿಕೆ ಸಮಸ್ಯೆ, ಕಲಿಕೆಯ ಸಮಸ್ಯೆ ಇತರೆ ಬಾಲ್ಯದ ಅಸ್ವಸ್ಥೆಗಳು ಮಾತಿನ ಸಮಸ್ಯೆ, ಧ್ವನಿ ಮತ್ತು ಉಚ್ಚಾರಣೆಗಳ ಸಮಸ್ಯೆ, ಸ್ಪೀಚ್ ಥೆರಪಿ ಶ್ರವಣ ಉಪಕರಣಗಳು ಹಾಗೂ ಕೃತಕ ಕಾಲು ಮತ್ತು ಅಂಗವಿಕಲತೆ ಪ್ರಮಾಣ ಪತ್ರ ಸೌಲಭ್ಯಗಳು ಲಭ್ಯವಿದೆ. ಮಾಹಿತಿಗೆ ಡಿ.ಡಿ.ಆರ್.ಸಿ ಕೇಂದ್ರದ ದೂ.ಸಂ: 8747917610, 9986161239ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.