×
Ad

ಪುದು ಗ್ರಾಮ ಪಂಚಾಯತ್ ಚುನಾವಣೆ: ಮತ್ತೆ ಅಧಿಕಾರಕ್ಕೇರಿದ ಕಾಂಗ್ರೆಸ್ ಬೆಂಬಲಿತ ಸದಸ್ಯರು

Update: 2023-02-28 22:07 IST

ಬಂಟ್ವಾಳ : ಬಂಟ್ವಾಳ ತಾಲೂಕಿನ, ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟ ಅವಧಿ ಪೂರ್ಣಗೊಂಡ ಪುದು ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಮಂಗಳವಾರ ಸಂಜೆ ವೇಳೆಗೆ ಬಿ ಸಿ ರೋಡಿನ ಆಡಳಿತ ಸೌಧದಲ್ಲಿ ಮುಕ್ತಾಯಗೊಂಡಿದ್ದು, ಅತೀ ಹೆಚ್ಚು ಸ್ಥಾನ ಪಡೆದಿರುವ ಕಾಂಗ್ರೆಸ್ ಬೆಂಬಲಿಗರು ಮತ್ತೆ ಪಂಚಾಯತ್ ಆಡಳಿತ ಚುಕ್ಕಾಣಿ ಉಳಿಸಿಕೊಂಡಿದ್ದಾರೆ.

ಒಟ್ಟು 34 ಸ್ಥಾನಗಳ ಪೈಕಿ 21 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಜಯದ ಪತಾಕೆ ಹಾರಿಸಿದ್ದಾರೆ. ಉಳಿದಂತೆ ಬಿಜೆಪಿ ತನ್ನ ಆರು ಸ್ಥಾನಗಳನ್ನು ಉಳಿಸಿಕೊಂಡಿದ್ದು, ಗಮನಾರ್ಹ ಸಾಧನೆಗೈದಿರುವ ಎಸ್ ಡಿ ಪಿ ಐ ಕಳೆದ ಬಾರಿಯ ಕೇವಲ ಒಂದು ಸ್ಥಾನದಿಂದ ಇದೀಗ 7ಕ್ಕೇರಿದೆ.

ಕಳೆದ ಬಾರಿ ಇಲ್ಲಿನ ಪಂಚಾಯತ್ ನಲ್ಲಿ 34 ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರು 27 ಸದಸ್ಯ ಬಲ ಹೊಂದಿತ್ತು. ಬಿಜೆಪಿ ಬೆಂಬಲಿತರು 6 ಹಾಗೂ ಎಸ್ಡಿಪಿಐ ಓರ್ವ ಬೆಂಬಲಿತ ಜಯಗಳಿಸಿದ್ದರು.

Similar News