×
Ad

ಐವರು ಹಿರಿಯ ರಂಗಕರ್ಮಿಗಳಿಗೆ ವಿಶ್ವರಂಗ ಪುರಸ್ಕಾರ

Update: 2023-03-01 20:26 IST

ಉಡುಪಿ, ಮಾ.೧:ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಮಲಬಾರ್ ಗೋಲ್ಡ್ ವತಿಯಿಂದ  ನೀಡಲಾಗುವ ವಿಶ್ವರಂಗ ಪುರಸ್ಕಾರ-2023ಕ್ಕೆ  ರಾಜ್ಯ ಮತ್ತು ಹೊರರಾಜ್ಯಗಳ ಐವರು ಹಿರಿಯ ರಂಗಕರ್ಮಿಗಳನ್ನು  ಆಯ್ಕೆ ಮಾಡಲಾಗಿದೆ. 

ಮೂರ್ತಿ ದೇರಾಜೆ (ರಂಗ ನಿರ್ದೇಶಕರು), ಶೋಭಾ ವೆಂಕಟೇಶ್  ಬೆಂಗಳೂರು (ಮಕ್ಕಳ ರಂಗಭೂಮಿ), ಎಂ.ಎಸ್. ಭಟ್ ಉಡುಪಿ (ರಂಗ ನಟ), ಮೋಹನ್ ಮಾರ್ನಾಡ್ ಮುಂಬೈ(ರಂಗ ನಟ ಹೊರ ರಾಜ್ಯ), ಪ್ರಕಾಶ್ ನೊರೋನ್ಹ ಪಾಂಬೂರು (ರಂಗ ಸಂಘಟಕರು)  ಇವರಿಗೆ ಮಾರ್ಚ್ 26ರಂದು ನಡೆಯುವ ವಿಶ್ವರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ‘ವಿಶ್ವರಂಗ ಪುರಸ್ಕಾರ- 2023’ ಪ್ರಧಾನ ಮಾಡಲಾಗುವುದು ಎಂದು ವಿಶ್ವರಂಗ ಪುರಸ್ಕಾರ ಸಮಿತಿಯ ಸಂಚಾಲಕ ರಾಜೇಶ್ ಭಟ್ ಪಣಿಯಾಡಿ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News