×
Ad

ದಿಲ್ಲಿಯ ಪುಸ್ತಕ ಮೇಳದಲ್ಲಿ ಕ್ರೈಸ್ತ ಸಂಸ್ಥೆಯ ಸ್ಟಾಲ್‌ನಲ್ಲಿ ದಾಂಧಲೆಗೈದ ಕಿಡಿಗೇಡಿಗಳು

Update: 2023-03-02 15:22 IST

ಹೊಸದಿಲ್ಲಿ: ದಿಲ್ಲಿಯಲ್ಲಿ ‌ಆಯೋಜಿಸಲಾಗಿರುವ ವರ್ಲ್ಡ್‌ ಬುಕ್‌ ಫೇರ್‌ನಲ್ಲಿ (Delhi Book Fair) ಕ್ರೈಸ್ತ ಲಾಭ-ರಹಿತ ಸಂಘಟನೆ – ಗಿಡಿಯೋನ್‌ ಇಂಟರ್‌ನ್ಯಾಷನಲ್‌ನ ಸ್ಟಾಲ್‌ ಒಂದರಲ್ಲಿ ಬೈಬಲ್‌ನ ಪ್ರತಿಗಳನ್ನು ವಿತರಿಸಲಾಗುತ್ತಿದೆ ಎಂದು ಆರೋಪಿಸಿ ಅದಕ್ಕೆ ಆಕ್ಷೇಪಿಸಿ ಆ ಪುಸ್ತಕ ಸ್ಟಾಲ್‌ನಲ್ಲಿ ದುಷ್ಕರ್ಮಿಗಳ ಗುಂಪೊಂದು ದಾಂಧಲೆ ನಡೆಸಿದೆ ಎಂದು The Indian Express ವರದಿ ಮಾಡಿದೆ.

ದುಷ್ಕರ್ಮಿಗಳು ಜೈ ಶ್ರೀ ರಾಮ್‌, ಭಾರತ್‌ ಮಾತಾ ಕಿ ಜೈ ಹಾಗೂ 'ಫ್ರೀ ಬೈಬಲ್‌ ಬಂದ್‌ ಕರೋ' ಎಂಬ ಘೋಷಣೆಗಳನ್ನು ಕೂಗಿ ಪ್ರತಿಭಟಿಸುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ಪುಸ್ತಕ ಮೇಳದ ಇತರ ಸ್ಟಾಲ್‌ಗಳಲ್ಲಿ ಇತರ ಧರ್ಮಗಳ ಗ್ರಂಥಗಳ ಉಚಿತ ವಿತರಣೆಯೂ ನಡೆಯುತ್ತಿವೆ ಎಂದು ಅಲ್ಲಿನ ಸ್ವಯಂಸೇವಕರೊಬ್ಬರು ಮಾದ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಕ್ರೈಸ್ತ ಸಂಘಟನೆಯ ಸ್ಟಾಲ್‌ ಅನ್ನು ಗುರಿಯಾಗಿಸಿದ್ದ ದುಷ್ಕರ್ಮಿಗಳು ಬಲವಂತವಾಗಿ ಬೈಬಲ್‌ಗಳನ್ನು ಪಡೆಯುವಂತೆ ಹೇಳಿ ಮತಾಂತರ ಯತ್ನ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆನ್ನಲಾಗಿದೆ.

ಪ್ರತಿಭಟನಾಕಾರರು ಧಾರ್ಮಿಕ ಪುಸ್ತಕಗಳನ್ನು ಮತ್ತು ಪೋಸ್ಟರ್‌ಗಳನ್ನು ಹರಿದುಹಾಕಿದ್ದಾರೆಂದು ಸ್ಟಾಲ್‌ನವರು ಹೇಳಿದರೂ ಪೊಲೀಸರು ಇದನ್ನು ನಿರಾಕರಿಸಿದ್ದಾರೆ.

ಗುಂಪೊಂದು ಕೇವಲ ಪ್ರತಿಭಟನೆ ನಡೆಸಿತ್ತು ಯಾವುದೇ ಹಿಂಸಾರೂಪಕ್ಕೆ ತಿರುಗಿಲ್ಲ. ಗಿಡಿಯೊನ್ ಸಂಸ್ಥೆ ದೂರು ನೀಡದೇ ಇರಲು ನಿರ್ಧರಿಸಿದೆ, ಸಮಸ್ಯೆ ಪರಿಹರಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ತ್ರಿಪುರಾದಲ್ಲಿ ಕಿಂಗ್ ಮೇಕರ್ ಆಗಲಿದಯೇ ತಿಪ್ರಾ ಮೋಥಾ ಪಕ್ಷ?

Similar News