ಆರೋಗ್ಯ ತಪಾಸಣೆ ಮಾಡಲು ಮುಂದೆ ಬನ್ನಿ: ಯು.ಟಿ ಖಾದರ್
ಮಂಗಳೂರು : ಇಂದಿನ ಆಹಾರ ಪದ್ಧತಿ ಮತ್ತು ವಿವಿಧ ತಿಂಡಿತಿನಿಸುಗಳು ಮನುಷ್ಯನ ಆರೋಗ್ಯ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ಆದರಿಂದ ಆರೋಗ್ಯ ತಪಾಸಣೆ ಮಾಡಲು ಸಾರ್ವಜನಿಕರು ಮುಂದೆ ಬರಬೇಕು ಎಂದು ಶಾಸಕ ಯು.ಟಿ.ಖಾದರ್ ಕರೆ ನೀಡಿದರು.
ಅವರು ನಗರದ ಕಾಸ್ಸಿಯಾ ಹೈಸ್ಕೂಲಿನ ವಠಾರದಲ್ಲಿ ಐವನ್ ಡಿ ಸೋಜರವರ ನೇತೃತ್ವದಲ್ಲಿ ನಡೆದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಕನ್ನಡಕ ವಿತರಿಸಿ ಮಾತನಾಡಿದರು.
ಕುಟುಂಬದ ರಕ್ಷಣೆಗಾಗಿ ಆರೋಗ್ಯದ ಮೇಲೆ ನಿಗಾ ವಹಿಸುವುದು ಅವಶ್ಯಕ ಎಂದು ವಿಧಾನ ಪರಿಷತ್ ಮಾಜಿ ಶಾಸಕ ಐವನ್ ಡಿ ಸೋಜರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಅಭಿನಂದಿಸಿದರು.
ವಿಧಾನ ಪರಿಷತ್ ಮಾಜಿ ಶಾಸಕ ಐವನ್ ಡಿ ಸೋಜ ಮಾತಾನಾಡಿ, ಶಿಬಿರದಲ್ಲಿ 54 ಮಂದಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಮತ್ತು 421 ಮಂದಿಗೆ ಕನ್ನಡಕ ವಿತರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬಹಳಷ್ಟು ಜನರು ಭಾಗವಹಿಸಿರುವುದು ಸಂತೋಷದ ವಿಷಯವಾಗಿದೆ. ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆವ ಮೂಲಕ ಆರೋಗ್ಯ ರಕ್ಷಣೆ ಮಾಡುವುದು ಉತ್ತಮ ಎಂದು ಶಿಬಿರದಲ್ಲಿ ಭಾಗಿಯಾದವರಿಗೆ ಮತ್ತು ಶಸ್ತ್ರ ಚಿಕಿತ್ಸೆಗೊಳಗಾದವರಿಗೆ ಅಭಿನಂದಿಸಿದರು.
ಈ ಸಂದರ್ಭ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕೆ.ಆಶ್ರಫ್, ಎ.ಜೆ ಆಸ್ಪತ್ರೆ ಪ್ರಸೂತಿ ಮತ್ತು ಹೆರಿಗೆ ತಜ್ಞ ಕವಿತಾ ಡಿ ಸೋಜ, ಪ್ರಸಾದ್ ನೇತ್ರಾಲಯದ ಆಡಳಿತಧಿಕಾರಿ ಸೈಯದ್, ಸದಾಶಿವ ಕುಮಾರ್, ಶಾಲೆಯ ಮುಖ್ಯೋಪಾಧ್ಯಯ ಎವರೆಸ್ಟ್ ಕ್ರಾಸ್ತ, ಭಾಸ್ಕರ್ ರಾವ್, ವಿವೇಕ್‌ರಾಜ್ ಪೂಜಾರಿ, ನೆಲ್ಸನ್ ಡಿ ಸೋಜ, ಪವಿತ್ರ ಕರ್ಕೆರಾ, ವಿದ್ಯಾ, ಗೀತಾ ಅತ್ತಾವರ, ಆಲಿಶ್ಟನ್, ಅಬಿಬುಲ್ಲ, ಮಹೇಶ್ ಕುಮಾರ್, ಪ್ರದೀಪ್ ಬೇಕಲ್, ಫಾರೂಕ್, ಸಿ.ಎಂ.ಮುಸ್ತಫ, ಸಲೀಂ ಮುಕ್ಕ, ಹೈದರ್ ಬೋಳಾರ್, ನಾರಾಯಾಣ ಕೋಟ್ಯಾನ್, ನವಾಜ್ ಜೆಪ್ಪು, ಮನೀಶ್ ಬೋಳಾರ್ ಮುಂತಾದವರು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ಕೆ.ರಾಥೋಡ್ ಇವರ ಪ್ರದೇಶಾಭಿವೃದ್ಧಿ ನಿಧಿಯಿಂದ ಅಂಗ ವಿಕಲತೆ ಕಲ್ಯಾಣ ಇಲಾಖೆ ವತಿಯಿಂದ ವಿಧಾನ ಪರಿಷತ್ ಮಾಜಿ ಶಾಸಕ ಐವನ್ ಡಿ ಸೋಜರವರ ಶಿಫಾರಸ್ಸಿನ ಮೇರೆಗೆ ೧ಲಕ್ಷ ರೂ. ಮೊತ್ತದ ತ್ರಿಚಕ್ರ ವಾಹನವನ್ನು ಫಲಾನಿಭವಿಯಾದ ಮೊಹಮ್ಮದ್ ಇಸಾಕ್ ಬಿನ್.ಇಬ್ರಾಹಿಂ ಅವರಿಗೆ ಹಸ್ತಾಂತರಿಸಿದರು.