ಮೇರಿಹಿಲ್: ಮನೆಗೆ ನುಗ್ಗಿ ನಗ-ನಗದು ಕಳವು
Update: 2023-03-04 22:32 IST
ಮಂಗಳೂರು, ಮಾ.4: ನಗರದ ಮೇರಿಹಿಲ್‌ನ ಮನೆಯೊಂದರ ಬಾಗಿಲು ಮುರಿದು ಚಿನ್ನಾಭರಣ ಮತ್ತು ನಗದು ಕಳವುಗೈದ ಘಟನೆ ಬೆಳಕಿಗೆ ಬಂದಿದ್ದು, ಕಾವೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮನೆ ಮಂದಿಯು ಫೆ.19ರಂದು ರಾತ್ರಿ ಮನೆಗೆ ಬೀಗ ಹಾಕಿ ಮೈಸೂರಿಗೆ ತೆರಳಿದ್ದು ಮಾ.3ರಂದು ವಾಪಸಾಗಿದ್ದರು. ಆಗ ಮನೆಯ ಮುಂಬಾಗಿಲಿನ ಬೀಗ ಮುರಿದು 3 ಗ್ರಾಂ ತೂಕದ ಚಿನ್ನದ ಪೆಂಡೆಂಟ್, 2 ಗ್ರಾಂ ತೂಕದ ಚಿನ್ನದ ನಾಣ್ಯ, 4 ಗ್ರಾಂ ತೂಕದ ಕಿವಿಯ ರಿಂಗ್, 4,000 ರೂ. ನಗದು ಸೇರಿದಂತೆ ಒಟ್ಟು ಅಂದಾಜು 50,000 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.