×
Ad

ಮಂಗಳೂರು: ಬ್ಯಾರಿ ಉದ್ಯೋಗ ಮೇಳಕ್ಕೆ ಚಾಲನೆ

Update: 2023-03-05 12:56 IST

ಮಂಗಳೂರು: ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ವತಿಯಿಂದ ನಗರದ ಪುರಭವನದಲ್ಲಿ ನಡೆಯುತ್ತಿರುವ ಬ್ಯಾರಿ ಮೇಳದಲ್ಲಿ ಉದ್ಯೋಗ ಮೇಳಕ್ಕೆ ಇಂದು ಚಾಲನೆ ‌ನೀಡಲಾಯಿತು‌. ಸುಮಾರು 500ಕ್ಕೂ ಅಧಿಕ ಮಂದಿ ಉದ್ಯೋಗ ಆಕಾಂಕ್ಷಿಗಳು ಹೆಸರು ನೋಂದಾಯಿಸಿದ್ದು, 25 ವಿವಿಧ ಕಂಪೆನಿಗಳು ಪಾಲ್ಗೊಂಡಿದ್ದವು. 

ಬಿಸಿಸಿಐ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ‌ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು. ಅತಿಥಿಗಳಾಗಿ ಹೀಟ್ ಸೊಲ್ಯೂಶನ್ ಕುವೈಟ್ ಇದರ ಸಿಇಒ ಇಂಜಿನಿಯರ್ ಅಬ್ದುಲ್ ಹಮೀದ್ ಕೊಳ್ಯಾರ್, ದುಬೈ ನಫೀಸ್ ಗ್ರೂಪ್‌ನ ಅಬೂಸಾಲಿಹ್, ಶಾರ್ಜಾದ ಮೋಹಾ ಪ್ಯಾಕೇಜ್‌ನ ಅಬ್ದುಸ್ಸಮದ್, ಮ್ಯಾಂಚೆಸ್ಟರ್ ಟ್ರೇಡಿಂಗ್ ಆ್ಯಂಡ್ ಕಾಂಟ್ರಾಕ್ಟಿಂಗ್ ಲಿ. ಇದರ ಅಬ್ದುಲ್ಲ ಮೋನು ಕತರ್‌, ಜಂಇಯ್ಯತುಲ್ ಫಲಾಹ್‌ನ ದ.ಕ. ಉಡುಪಿ ಜಿಲ್ಲಾಧ್ಯಕ್ಷ ಶಬಿ ಅಹ್ಮದ್ ಖಾಝಿ, ಮಂಗಳೂರು ನಗರ ಘಟಕದ ಅಧ್ಯಕ್ಷ ಅಬ್ದುರ್ರಝಾಕ್ ಮತ್ತಿತರರು ಭಾಗವಹಿಸಿದ್ದರು.

ಬ್ಯಾರಿ ಮೇಳದ ಸಂಚಾಲಕರಾದ ಮುಮ್ತಾಜ್ ಅಲಿ, ಮನ್ಸೂರ್ ಅಹ್ಮದ್ ಆಝಾದ್, ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಉಪಸ್ಥಿತರಿದ್ದರು. ನಿಸಾರ್ ಫಕೀರ್ ಮುಹಮ್ಮದ್ ಸ್ವಾಗತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ಜಂಇಯ್ಯತುಲ್ ಫಲಾಹ್ ಮಂಗಳೂರು ನಗರ ಸಮಿತಿಯ ನೂತನ ಯೋಜನೆ "ಜೆಎಫ್ ಕೆರಿಯರ್ ಕೇರ್"ಗೆ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು.

Similar News