ಉತ್ತರ ಪ್ರದೇಶ| ಚರ್ಚ್‌ ಮೇಲೆ ಬಜರಂಗದಳ ದಾಳಿ: ಎರಡು ವಾರ ಕಳೆದರೂ ಎಫ್‌ಐಆರ್‌ ದಾಖಲಿಸದ ಪೊಲೀಸರು; ವರದಿ

Update: 2023-03-05 17:02 GMT

ಲಕ್ನೋ: ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಫೆಬ್ರವರಿ 19 ರಂದು ಬಜರಂಗದಳದ ಕಾರ್ಯಕರ್ತರ ಗುಂಪೊಂದು ಚರ್ಚ್ ಅನ್ನು ಧ್ವಂಸಗೊಳಿಸಿ, ಆರಾಧಕರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.  ಚರ್ಚ್ ʼಬಲವಂತದ ಧಾರ್ಮಿಕ ಮತಾಂತರಗಳನ್ನುʼ ನಡೆಸುತ್ತಿದೆ ಎಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು thewire.in ವರದಿ ಮಾಡಿದೆ.

ಹಿಮಾಲಯನ್ ಇವಾಂಜೆಲಿಕಲ್ ಮಿಷನ್ ನಲ್ಲಿ ಈ ಘಟನೆ ನಡೆದಿದೆ. "ಫೆಬ್ರವರಿ 19 ರಂದು 50-60 ಜನರ ಗುಂಪು ರಾಡ್ ಮತ್ತು ದೊಣ್ಣೆಗಳೊಂದಿಗೆ ಬಂದು ನಮ್ಮ ಪ್ರಾರ್ಥನೆಗೆ ಅಡ್ಡಿಪಡಿಸಿತು. ಅವರು ಚರ್ಚ್‌ನಲ್ಲಿ ಹಿಂದೂಗಳನ್ನು ಕ್ರಿಶ್ಚಿಯನ್ ಆಗಿ ಪರಿವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ನನಗೆ ಮತ್ತು ನನ್ನ ಮಗನಿಗೆ ರಾಡ್‌ಗಳಿಂದ ಹೊಡೆದರು" ಎಂದು ಪಾದ್ರಿ ಸತ್ಯೇನ್ ಬಿಶ್ವಕರ್ಮಾ ಆರೋಪಿಸಿದ್ದಾರೆ. 

ಸಿದ್ದಾರ್ಥನಗರ ಪೊಲೀಸರು ಬಜರಂಗದಳದ ವಿರುದ್ಧ ಎಫ್‌ಐಆರ್‌  ದಾಖಲಿಸಲು ನಿರಾಕರಿಸಿದ್ದರಿಂದ ತಮ್ಮ ಕುಟುಂಬ ನಿರಂತರ ಭಯದಲ್ಲಿ ಬದುಕುತ್ತಿದೆ ಎಂದು ಪಾದ್ರಿ ತಿಳಿಸಿದ್ದಾರೆ.

ಘಟನೆ ನಡೆದು ಇಲ್ಲಿವರೆಗೆ, (ಮಾರ್ಚ್ 5) ರವರೆಗೆ ಪೊಲೀಸರು ಇನ್ನೂ ಎಫ್‌ಐಆರ್ ದಾಖಲಿಸಿಲ್ಲ ಎಂದು thewire.in ವರದಿ ಮಾಡಿದೆ.

ದಲಿತ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರ ಮೇಲೆ ಬಜರಂಗ ದಳ ಸದಸ್ಯರು ಥಳಿಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಫಿಸಿರುವುದಾಗಿ ಸಂತ್ರಸ್ತ ಮಹಿಳೆ theWire ಗೆ ತಿಳಿಸಿದ್ದಾರೆ. ಚರ್ಚ್‌ಗೆ ತೆರಳದಂತೆ ಅವರು ಬೆದರಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.

“ಪೊಲೀಸರು ಅವರ ವಿರುದ್ಧ ಏಕೆ ಎಫ್‌ಐಆರ್ ದಾಖಲಿಸಿಲ್ಲ? ಅವರು [ಚರ್ಚ್‌ಗೆ] ಬಂದಾಗ ಪೊಲೀಸರು ಎಲ್ಲವನ್ನೂ ನೋಡಿದ್ದಾರೆ. ಆದರೆ ಮಧ್ಯಪ್ರವೇಶಿಸಲಿಲ್ಲ, ಅವರು ಗುಂಪನ್ನು [ಬಜರಂಗದಳ]ವನ್ನು ಬೆಂಬಲಿಸಿದರು”ಎಂದು ಮಹಿಳೆ ಆರೋಪಿಸಿದ್ದಾರೆ.

ದಲಿತ ಸಮುದಾಯಕ್ಕೆ ಸೇರಿದ ಹಲವಾರು ಸ್ಥಳೀಯರು, ಪ್ರತಿ ರವಿವಾರ ಚರ್ಚ್‌ಗೆ ಪ್ರಾರ್ಥನೆ ಸಲ್ಲಿಸಲು ಹೋಗುತ್ತಾರೆ, ಅವರು ಕ್ರಿಶ್ಚಿಯನ್ ಧರ್ಮವನ್ನು ಆಚರಿಸುವುದಿಲ್ಲ, ಆದರೆ ಪ್ರಾರ್ಥನೆ ಮಾಡಲು ಮಾತ್ರ ಚರ್ಚ್‌ಗೆ ಭೇಟಿ ನೀಡುತ್ತಾರೆ. ಆದರೆ, ಪಾದ್ರಿ ಅವರನ್ನು ಮತಾಂತರ ಮಾಡುತ್ತಿದ್ದಾರೆ ಎಂದು ಬಜರಂಗದಳ ಆರೋಪಿಸಿದೆ.

ಇದನ್ನು ಓದಿ:  ಅದಾನಿ ಗ್ರೂಪ್ ಔದ್ಯಮಿಕ ಪ್ರಗತಿ ಬಗ್ಗೆ ಎಲ್ಐಸಿಗೆ ವಿಶ್ವಾಸ ಭಾರತೀಯ ಜೀವವಿಮಾ ನಿಗಮ ಚೇರ್ಮನ್ ಎಂ.ಆರ್.ಕುಮಾರ್

Similar News