×
Ad

​ಮುಂಬೈ- ಕೊಚ್ಚುವೇಲು ರೈಲಿಗೆ ಬೈಂದೂರಿನಲ್ಲಿ ನಿಲುಗಡೆ

Update: 2023-03-06 19:10 IST

ಉಡುಪಿ, ಮಾ.6: ಮುಂಬೈಯ ಲೋಕಮಾನ್ಯ ತಿಲಕ್ ನಿಲ್ದಾಣ ಹಾಗೂ ಕೊಚ್ಚುವೇಲ್ ನಡುವೆ ವಾರಕ್ಕೆ ಎರಡು ಬಾರಿ ಸಂಚರಿಸುವ ಗರೀಬಿ ರಥ್‌ಗೆ ನಾಳೆಯಿಂದ ಮೂಕಾಂಬಿಕಾ ರೋಡ್ ಬೈಂದೂರು ನಿಲ್ದಾಣದಲ್ಲಿ ನಿಲುಗಡೆ ನೀಡಲಾಗುತ್ತದೆ ಎಂದು ಕೊಂಕಣ ರೈಲ್ವೆ  ಪ್ರಕಟಣೆ ತಿಳಿಸಿದೆ.

ನಂ.12201 ಮುಂಬೈ-ಕೊಚ್ಚುವೇಲ್ ರೈಲಿಗೆ ಮಾ.7ರಿಂದ ಈ ನಿಲುಗಡೆ ಇರುತ್ತದೆ. ಸಾಮಾನ್ಯ ಅವಧಿಯಲ್ಲಿ ಜೂ.9ರವರೆಗೆ ಸಂಜೆ 5:38ಕ್ಕೆ ಬೈಂದೂರಿಗೆ ಆಗಮಿಸುವ ರೈಲು 5:40ಕ್ಕೆ ನಿರ್ಗಮಿಸಲಿದೆ. ಜೂ.11ರಿಂದ ಮಾನ್ಸೂನ್ ವೇಳಾ ಪಟ್ಟಿಯಂತೆ ಸಂಜೆ 7:38ಕ್ಕೆ ಆಗಮಿಸುವ ರೈಲು 7:40ಕ್ಕೆ ನಿರ್ಗಮಿಸಲಿದೆ. 

ನಂ.12202 ಕೊಚ್ಚುವೇಲು- ಮುಂಬೈ ರೈಲಿಗೆ ಮಾ.9ರಿಂದ ಬೈಂದೂರಿನಲ್ಲಿ ನಿಲುಗಡೆ ಇದ್ದು, ಸಾಮಾನ್ಯ ವೇಳಾ ಪಟ್ಟಿಯಂತೆ ಜೂ.9ರವರೆಗೆ ರಾತ್ರಿ 10:20ಕೆ ಆಗಮಿಸುವ ರೈಲು 10:22ಕ್ಕೆ ಬೈಂದೂರಿನಿಂದ ನಿರ್ಗಮಿಸಲಿದೆ. ಜೂ.11ರ ಮಾನ್ಸೂನ್ ವೇಳಾ ಪಟ್ಟಿಯಂತೆ ರಾತ್ರಿ 10:14ಕ್ಕೆ ಆಗಮಿಸುವ ರೈಲು 10:16ಕ್ಕೆ ಬೈಂದೂರಿನಿಂದ ನಿರ್ಗಮಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕಡೂರಿನಲ್ಲಿ ನಿಲುಗಡೆ: ಅದೇ ರೀತಿ ವಾಸ್ಕೋಡಗಾಮ- ಯಶವಂತಪುರ ಜಂಕ್ಷನ್- ವಾಸ್ಕೋಡಗಾಮ ದೈನಂದಿನ ಎಕ್ಸ್‌ಪ್ರೆಸ್ ರೈಲಿಗೆ ಸೆಪ್ಟಂಬರ್ 3ರವರೆಗೆ ಕಡೂರು ಜಂಕ್ಷನ್‌ನಲ್ಲಿ ನಿಲುಗಡೆ ನೀಡಲು ನಿರ್ಧರಿಸಲಾಗಿದೆ. ವಾಸ್ಕೋಡಗಾಮದಿಂದ ಆಗಮಿಸುವಾಗ ಬೆಳಗ್ಗೆ 8:59ಕ್ಕೆ ಕಡೂರು ಜಂಕ್ಷನ್ ತಲುಪುವ ರೈಲು 9 ಗಂಟೆಗೆ ನಿರ್ಗಮಿಸಲಿದೆ.

ಅದೇ ರೀತಿ ಯಶವಂತಪುರದಿಂದ ಆಗಮಿಸುವ ರೈಲು ಸಂಜೆ 5:38ಕ್ಕೆ ಕಡೂರು ಜಂಕ್ಷನ್ ತಲುಪಲಿದ್ದು, 5:39ಕ್ಕೆ ಅಲ್ಲಿಂದ ತೆರಳಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Similar News