×
Ad

ಉಳ್ಳಾಲ: ಅಹ್ಲನ್ ರಂಝಾನ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

Update: 2023-03-07 22:02 IST

ಉಳ್ಳಾಲ: ನ್ಯಾಷನಲ್ ಮಿಷನ್ ಕರ್ನಾಟಕ ಇದರ ಆಶ್ರಯದಲ್ಲಿ  ಮಾರ್ಚ್ 18 ರಂದು ಉಳ್ಳಾಲ ದ ಹಝ್ರತ್ ಶಾ ಲಾ ಮೈದಾನದಲ್ಲಿ ನಡೆಯುವ ಅಹ್ಲನ್ ರಂಝಾನ್ ಕಾರ್ಯಕ್ರಮದಲ್ಲಿ ಸಿಂಸಾರುಲ್ ಹಕ್ ಹುದವಿ , ಸಯ್ಯದುಲ್ ಉಲಮಾ ಜಿಫ್ರಿ ತಂಙಳ್ ಸಹಿತ ಹಲವು ಧಾರ್ಮಿಕ ಮುಖಂಡರು ಭಾಗವಹಿಸಲಿದ್ದು, ಈ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಉಳ್ಳಾಲ ದರ್ಗಾ ವಠಾರದಲ್ಲಿ ಮಂಗಳವಾರ ನಡೆಯಿತು.

ಮೌಲಾನಾ ಅಬ್ದುಲ್ ರಹಿಮಾನ್ ದಾಯಿ ದುಆ ನೆರವೇರಿಸಿದರು.

ಈ ಕಾರ್ಯಕ್ರಮ ದಲ್ಲಿ ನ್ಯಾಷನಲ್ ಮಿಷನ್ ಕರ್ನಾಟಕದ ಕಾರ್ಯದರ್ಶಿ ಇಸಾಕ್ ಹಾಜಿ ತೋಡಾರು, ಕೋಶಾಧಿಕಾರಿ ಶರೀಫ್ ಮೂಸ ಕುದ್ದುಪದವು, ಉಪಾಧ್ಯಕ್ಷ  ರಶೀದ್ ಹಾಜಿ ಪರ್ಲಡ್ಕ ಸ್ವಾಗತ ಸಮಿತಿ ಅಧ್ಯಕ್ಷ , ನಝೀರ್ ಉಳ್ಳಾಲ , ಕನ್ವೀನರ್ ಸಲೀಂ ಹಂಡೇಲು , ಸಿತಾರ್ ಮಜೀದ್ ಹಾಜಿ, ಸ್ವಾಗತ ಸಮಿತಿ ಉಪಾಧ್ಯಕ್ಷ ರಝಾಕ್‌,ಇಬ್ರಾಹಿಂ ಕೊಣಾಜೆ, ವೈಸ್ ಕನ್ವೀನರ್ ಫೈಝಲ್ ಮದನಿ ನಗರ , ಸದಸ್ಯ ಹನೀಫ್ ಉಚ್ಚಿಲ, ಫಾರೂಕ್ ಉಳ್ಳಾಲ,ಕಬೀರ್ ಚಾಯಬ್ಬ, ಇಸ್ಮಾಯಿಲ್, ಚೆರಿಯೋನು, ಸಯ್ಯದ್ ಇಬ್ರಾಹಿಂ ತಂಙಳ್ ಉಳ್ಳಾಲ, ಯು.ಟಿ. ಮುಹಮ್ಮದ್ ಹಾಜಿ ಉಳ್ಳಾಲ, ಕೆ.ಎಸ್ ಮೊಯ್ದಿನ್ ಉಳ್ಳಾಲ, ಉಸ್ತಾದ್ ಎಮ್ ಹಮ್ಮಬ್ಬ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.

Similar News