×
Ad

ನನಗೆ ಮೋಸ ಮಾಡಿದ್ದಾರೆ: ಕಚ್ಚಾ ಬಾದಾಂ ಖ್ಯಾತಿಯ ಭುವನ್‌ ಬಡ್ಯಾಕರ್‌ ಆರೋಪ

Update: 2023-03-07 22:45 IST

ಹೊಸದಿಲ್ಲಿ: ಕಳೆದ ಎರಡು ವರ್ಷಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ವಿಶಿಷ್ಟ ಶೈಲಿಯ ಗಾಯನದೊಂದಿಗೆ ಸಂಚಲನ ಮೂಡಿಸಿದ್ದ ʼಕಚಾ ಬಾದಂʼ ಖ್ಯಾತಿಯ ಗಾಯಕ ಭುವನ್ ಬಡ್ಯಾಕರ್ ಅವರು ತಾನು ವಂಚನೆಗೊಳಗಾಗಿರುವುದಾಗಿ ಆರೋಪಿಸಿದ್ದಾರೆ. 
 
 
2021 ರಲ್ಲಿ ಹಾಡು ವೈರಲ್‌ ಆಗುವ ಮೊದಲು ಭಿರ್‌ಭೂಮ್‌ ಮೂಲದಉದ್ಯಮಿ ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿಯೊಬ್ಬರು ‘ಇಂಡಿಯನ್ ಪರ್‌ಫಾರ್ಮಿಂಗ್ ಸೊಸೈಟಿ’ ಹೆಸರಿನಲ್ಲಿ ನನ್ನ ಕಚ್ಚಾ ಬಾದಾಮ್ ಹಾಡು ಮತ್ತು ಟ್ಯೂನ್‌ ಅನ್ನು ತಮ್ಮದು ಎಂದು ನನ್ನನ್ನು ವಂಚಿಸಿದ್ದಾರೆ ಎಂದು ಬಡ್ಯಾಕರ್ ಆರೋಪಿಸಿದ್ದಾರೆ.

 ʼನಾನೀಗ ಆ ಹಾಡನ್ನು ಯೂಟ್ಯೂಬ್‌ನಲ್ಲಿ ಹಾಕಲು ಹೋದರೆ ಕಾಪಿರೈಟ್ ಕ್ಲೈಮ್ (ಹಕ್ಕು ಸ್ವಾಮ್ಯ) ಬರುತ್ತಿದೆ. ಉದ್ಯಮಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ನನ್ನ ಹಾಡು ಕೇಳಿ ₹3 ಲಕ್ಷ ನೀಡಿ ಕಾಗದವೊಂದರ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ. ನನಗೆ ಸರಿಯಾಗಿ ಓದಲು ಬರದಿದ್ದರಿಂದ ಕಾಗದದಲ್ಲಿ ಏನಿತ್ತು ಅನ್ನುವುದು ನನಗೆ ಗೊತ್ತಾಗಿರಲಿಲ್ಲ. ಆದರೆ, ಇದೀಗ ನಾನು ಯೂಟ್ಯೂಬ್‌ನಲ್ಲಿ ಆ ಹಾಡು ಹಾಗೂ ಟ್ಯೂನ್‌ ಅನ್ನು ಹಾಕಲು ಆಗುತ್ತಿಲ್ಲ’ ಎಂದು ಆರೋಪಿಸಿದ್ದಾರೆ.


ಬಿರ್ಭೂಮ್‌ನ ದುಬ್ರಾಜ್‌ಪುರದ ಲಕ್ಷ್ಮೀನಾರಾಯಣಪುರ ಗ್ರಾಮದ ನಿವಾಸಿಯಾಗಿರುವ ಬಡ್ಯಾಕರ್‌ ಸದ್ಯ ದುಬ್ರಾಜಪುರದಲ್ಲಿ ನೆಲೆಸಿದ್ದಾರೆ.

Similar News