×
Ad

ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿಯಾಗಿ ವಸಂತಿ ಆಯ್ಕೆ

Update: 2023-03-08 18:20 IST

ಉಡುಪಿ, ಮಾ.8: ಮಹಾತಾಯಿ ರಮಾ ಬಾಯಿ ಅಂಬೇಡ್ಕರ್‌ರವರ 125ನೇ ಜನ್ಮ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಜೈಭೀಮ್ ಭವನದಲ್ಲಿ ಜರಗಿದ ರಾಜ್ಯ ದಲಿತ ಮಹಿಳಾ ಒಕ್ಕೂಟದ ಸರ್ವಸದಸ್ಯರ ಸಭೆಯಲ್ಲಿ ಉಡುಪಿ ಜಿಲ್ಲೆಯಿಂದ ರಾಜ್ಯ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿಯಾಗಿ  ವಸಂತಿ ಶಿವಾನಂದ ಅವರನ್ನು ಆಯ್ಕೆ ಮಾಡಲಾಯಿತು.

ಪ್ರಸ್ತುತ ವಸಂತಿ, ದೀಪಜ್ಯೋತಿ ವಿಹಾನ್ ಪ್ರೊಜೆಕ್ಟ್‌ನಲ್ಲಿ ಹೆಲ್ತ್ ಪ್ರಮೋಟ ರಾಗಿ, ಎನ್‌ಆರ್‌ಎಲ್‌ಎಂನಲ್ಲಿ ಎಂಸಿಆರ್‌ಪಿ ಹಾಗೂ ಬಿಆರ್‌ಪಿ ಆಗಿ ಮತ್ತು ಕಾರ್ಡ್ ಸಂಸ್ಥೆಯಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಯಾಗಿ, ಆರೋಗ್ಯ ಇಲಾಖೆಯಲ್ಲಿ ಆಶಾ ಕಾರ್ಯಕರ್ತೆಯಾಗಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪಡುಬಿದ್ರಿ ಶಾಖೆಯಲ್ಲಿ ಮಹಿಳಾ ಸಂಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News