ರಮಝಾನ್‌ನಲ್ಲಿ ಧಾರ್ಮಿಕ ಕೇಂದ್ರಗಳಿಗೆ ರಕ್ಷಣೆಗೆ ಒತ್ತಾಯಿಸಿ ಪೊಲೀಸ್ ಆಯುಕ್ತರಿಗೆ ಮುಸ್ಲಿಂ ಲೀಗ್ ಮನವಿ
Update: 2023-03-08 19:08 IST
ಮಂಗಳೂರು: ರಮಝಾನ್ ಸಂದರ್ಭ ರಾಜ್ಯ ವಿಧಾನಸಭಾ ಚುನಾವಣೆಯೂ ನಡೆಯುವ ಸಾಧ್ಯತೆಯಿದೆ. ಹಾಗಾಗಿ ಎಲ್ಲಾ ಮಸೀದಿಗಳು ಮತ್ತು ಧಾರ್ಮಿಕ ಕೇಂದ್ರಗಳಿಗೆ ಅಗತ್ಯ ರಕ್ಷಣೆಯನ್ನು ನೀಡಬೇಕು. ರಮಝಾನ್ ತಿಂಗಳ ರಾತ್ರಿ ಪ್ರಾರ್ಥನೆಗಾಗಿ ತೆರಳುವವರಿಗೆ ರಕ್ಷಣೆ ಮತ್ತು ಮುಂಜಾನೆಯ ಅಝಾನ್ ಕರೆಗೆ ಧ್ವನಿವರ್ಧಕ ಬಳಸಲು ಅನುಮತಿ ನೀಡಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಂ ಲೀಗ್ ನಿಯೋಗವು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ. ಜಿಲ್ಲಾಧ್ಯಕ್ಷ ಸಿ.ಅಬ್ದುಲ್ ರಹ್ಮಾನ್, ರಾಜ್ಯ ಮುಸ್ಲಿಂ ಲೀಗ್ ಸದಸ್ಯ ಎ.ಎಸ್.ಇ. ಕರೀಂ ಕಡಬ, ರಿಯಾಝ್ ಹರೇಕಳ, ಮುಹಮ್ಮದ್ ಬಶೀರ್ ಉಳ್ಳಾಲ್, ಎಚ್. ಮುಹಮ್ಮದ್ ಇಸ್ಮಾಯಿಲ್ ಹಾಜಿ, ಮುಹಮ್ಮದ್ ಬಿ.ಎ. ನಿಯೋಗದಲ್ಲಿದ್ದರು.