ಈಜಿಪ್ಟ್: ರೈಲು ಹಳಿತಪ್ಪಿ 2 ಮಂದಿ ಮೃತ್ಯು
Update: 2023-03-08 22:07 IST
ಕೈರೊ, ಮಾ.8: ಕೈರೊ ನಗರದ ಉತ್ತರದಲ್ಲಿರುವ ಖಲ್ಯೂಬ್ ಪಟ್ಟಣದಲ್ಲಿ ಮಂಗಳವಾರ ಸಂಭವಿಸಿದ ರೈಲು ಅಪಘಾತದಲ್ಲಿ ಕನಿಷ್ಟ 2 ಮಂದಿ ಮೃತಪಟ್ಟಿದ್ದು ಇತರ 16 ಮಂದಿ ಗಾಯಗೊಂಡಿರುವುದಾಗಿ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
ಮೆನೌಫ್ ನಗರಕ್ಕೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ರೈಲು ಖಲ್ಯೂಬ್ ರೈಲು ನಿಲ್ದಾಣದ ಬಳಿ ಹಳಿತಪ್ಪಿದ್ದು ಹಲವು ಬೋಗಿಗಳು ಮಗುಚಿ ಬಿದ್ದಿವೆ. ತಕ್ಷಣ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ ಬೋಗಿಗಳ ಕಿಟಕಿಗಾಜನ್ನು ಕತ್ತರಿಸಿ ಪ್ರಯಾಣಿಕರಿಗೆ ಹೊರಗೆ ಬರಲು ಅವಕಾಶ ಮಾಡಿದೆ. ದುರಂತದಲ್ಲಿ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದು 16 ಮಂದಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ 20 ಆಂಬ್ಯುಲೆನ್ಸ್‍ಗಳನ್ನು ರವಾನಿಸಲಾಗಿದ್ದು ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ತಿಳಿಸಿದೆ.