ತಮಿಳುನಾಡು: ಬಿಜೆಪಿಯ 13 ಪದಾಧಿಕಾರಿಗಳು ರಾಜೀನಾಮೆ
Update: 2023-03-08 23:27 IST
ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿಯ 12ಕ್ಕೂ ಅಧಿಕ ಪದಾಧಿಕಾರಿಗಳು ಎಐಎಡಿಎಂಕೆಗೆ ಸೇರಲು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷಕ್ಕೆ ರಾಜೀನಾಮೆ ನೀಡಲು ನಾಯಕತ್ವದ ಕುರಿತು ಇರುವ ಅಸಮಾಧಾನವೇ ಕಾರಣ ಎಂದು ಅವರು ಹೇಳಿದ್ದಾರೆ.
ಚೆನ್ನೈ ಪಶ್ಚಿಮದಲ್ಲಿರುವ ಬಿಜೆಪಿ ಐಟಿ ಘಟಕಕ್ಕೆ ಸೇರಿದ ಎಲ್ಲಾ 13 ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜೀನಾಮೆ ನೀಡಿದವರಲ್ಲಿ ಪಕ್ಷದ ರಾಜ್ಯ ಐಟಿ ಘಟಕದ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ ಹಾಗೂ ರಾಜ್ಯ ಕಾರ್ಯದರ್ಶಿ ದಿಲೀಪ್ ಕಣ್ಣನ್ ಸೇರಿದ್ದಾರೆ.
ಪಕ್ಷಕ್ಕೆ ಮೊದಲು ರಾಜೀನಾಮೆ ನೀಡಿದವರಲ್ಲಿ ಒಬ್ಬರಾದ ನಿರ್ಮಲ್ ಕುಮಾರ್, ಪಕ್ಷ ತ್ಯಜಿಸಲು ತಮಿಳುನಾಡು ಘಟಕದ ವರಿಷ್ಠ ಕೆ. ಅಣ್ಣಾಮಲೈ ಕಾರಣ ಎಂದು ಹೇಳಿದ್ದಾರೆ.