ತ್ರಿಡಿ ಕಲಾಕೃತಿಯಲ್ಲಿ ಧೂಮಪಾನ ನಿಷೇಧ ದಿನ
Update: 2023-03-09 18:25 IST
ಉಡುಪಿ, ಮಾ.9: ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ಕಲಾ ವಿದರಾದ ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಇವರು ಕೆಎಂಸಿ ಇಂಟರಾಕ್ಟ್ ಆವರಣದಲ್ಲಿ ತಂಬಾಕಿನ ಬಗ್ಗೆ ಜಾಗೃತಿ ಮೂಡಿಸುವಂತಹ ಬೃಹತ್ ತ್ರಿಡಿ ಕಲಾಕೃತಿಯನ್ನು ರಚಿಸಿದರು.
ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ ಅಶ್ವಿನಿಕುಮಾರ್ ಅವರು ಧೂಮಪಾನ ಮಾಡುವವರು ಬಲಿಯಾಗಬಹುದಾದ ಹಲವಾರು ಕಾಯಿಲೆಗಳ ಬಗ್ಗೆ ಹಾಗೂ ಧೂಮಪಾನವನ್ನು ನಿಲ್ಲಿಸುವುದರಿಂದ ಅಗುವ ಒಳಿತುಗಳ ಕುರಿತು ವಿವರಿಸಿದರು. ಹಾಗೂ ಯುವಜನತೆಯು ಇಂತಹ ಚಟಕ್ಕೆ ಬಲಿಯಾಗದಂತೆ ಎಚ್ಚರಿಕೆಯ ಸಂದೇಶವನ್ನು ನೀಡಿದರು.
ಕಲಾಕೃತಿಯಲ್ಲಿ ಧೂಮಪಾನಕ್ಕೆ ಬಲಿಯಾಗುತ್ತಿರುವ ಮತ್ತು ಅದರ ಚಟದಿಂದ ಹೊರಗೆ ಬರಲು ಪ್ರಯತ್ನಿಸು ತ್ತಿರುವ ಯುವ ಜನತೆಯನ್ನು ಕಲಾವಿದರು ಬಿಂಬಿಸಿದ್ದಾರೆ.