ಆಲ್ಟ್ ನ್ಯೂಸ್‌ನ ಮಹಮ್ಮದ್ ಝುಬೈರ್‌ಗೆ ಆನ್‌ಲೈನ್‌ನಲ್ಲಿ ಸರಣಿ ಕೊಲೆ ಬೆದರಿಕೆ
Update: 2023-03-09 23:26 IST
ಹೊಸದಿಲ್ಲಿ: ಆಲ್ಟ್ ನ್ಯೂಸ್‌ನ ಸಹ-ಸಂಸ್ಥಾಪಕ ಮಹಮ್ಮದ್ ಝುಬೈರ್ ಅವರಿಗೆ ಸಂಘ ಪರಿವಾರದ ಬೆಂಬಲಿಗರು ಆನ್‌ಲೈನ್‌ನಲ್ಲಿ ಸರಣಿ ಬೆದರಿಕೆ ಒಡ್ಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಝುಬೈರ್ ಅವರ ವಿರುದ್ಧ ʼಅಖ್ಲಾಕ್ʼ ರೀತಿಯ ದಾಳಿ ಸೇರಿದಂತೆ ವಿವಿಧ ಬೆದರಿಕೆಗಳನ್ನು ಒಡ್ಡಲಾಗಿದೆ ಎಂದು ಅವು ತಿಳಿಸಿವೆ.
ಝುಬೈರ್ ಕುಟುಂಬದ ಮಹಿಳೆಯರನ್ನು ನಿಂದಿಸಿದ ವ್ಯಕ್ತಿಯನ್ನು ಎದುರು ಹಾಕಿಕೊಂಡ ಬಳಿಕ ಝುಬೈರ್ ಅವರಿಗೆ ಈ ಬೆದರಿಕೆಗಳು ಬರಲು ಆರಂಭವಾಗಿವೆ. ಇನ್ನೊಂದೆಡೆ, ಸುಪ್ರೀಂ ಕೋರ್ಟ್‌ನ ವಕೀಲ ಶಶಾಂಕ್ ಶೇಖರ್ ಝಾ ಅವರು ‘‘ತಾನು ಝುಬೈರ್ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಟ್ಟೀಟ್ ಮಾಡಿದ್ದಾರೆ.
ಝುಬೈರ್ ಅವರಿಗೆ ಬೆದರಿಕೆ ಒಡ್ಡಿದವರಲ್ಲಿ ಬಲಪಂಥೀಯ ಅಂಕಣಕಾರ ಹರ್ಶಿಲ್ ಮೆಹ್ತಾ ಹಾಗೂ ಓಪ್ ಇಂಡಿಯಾದ ಮಾಜಿ ಸಂಪಾದಕ ಅಜಿತ್ ಭಾರ್ತಿ ಕೂಡ ಸೇರಿದ್ದಾರೆ.