ಕದ್ರಿ ವಸತಿ ಸಮುಚ್ಚಯಕ್ಕೆ ಅಕ್ರಮ ಪ್ರವೇಶ ಆರೋಪ: ಯುವಕ ಪೊಲೀಸ್ ವಶಕ್ಕೆ
Update: 2023-03-10 20:10 IST
ಮಂಗಳೂರು: ನಗರದ ಕದ್ರಿ ವಸತಿ ಸಮುಚ್ಚಯ ಪ್ರದೇಶಕ್ಕೆ ಅಪರಿಚಿತ ಯುವಕನೊಬ್ಬ ಶುಕ್ರವಾರ ಅಕ್ರಮ ಪ್ರವೇಶ ಮಾಡಿದ ಆರೋಪದಲ್ಲಿ ಯುವಕನನ್ನು ವಶಕ್ಕೆ ಪಡೆಯಲಾಗಿದೆ.
ತಲಪಾಡಿ ನಿವಾಸಿ ತೌಸೀಮ್ (19) ಎಂಬಾತ ಶುಕ್ರವಾರ ಸಂಜೆಯ ವೇಳೆ ಈ ಅಪಾರ್ಟ್‌ಮೆಂಟ್‌ನೊಳಗೆ ಪ್ರವೇಶಿಸಿ ಕಾರು ಪಾರ್ಕಿಂಗ್ ಸ್ಥಳದಲ್ಲಿ ತಿರುಗಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಅಲ್ಲಿನ ನಿವಾಸಿಗಳು ಅನುಮಾನಗೊಂಡು ಕದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅದರಂತೆ ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆ ಆರೋಪಿ ಪರಾರಿಯಾಗಲು ಯತ್ನಿಸಿದ ಎನ್ನಲಾಗಿದೆ. ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.