ಸಿಐಎಸ್‌ಎಫ್‌ನ 54ನೇ ಸ್ಥಾಪನಾ ದಿನಾಚರಣೆ
Update: 2023-03-10 21:42 IST
ಮಂಗಳೂರು, ಮಾ.10: ಸಿಐಎಸ್‌ಎಫ್‌ನ 54ನೇ ಸ್ಥಾಪನಾ ದಿನವನ್ನು ಶುಕ್ರವಾರ ಆಚರಿಸಲಾಯಿತು.
ದೇಶದ ಆರು ಅರೆಸೇನಾ ಪಡೆಗಳಲ್ಲಿ ಒಂದಾಗಿರುವ ಸಿಐಎಸ್‌ಎಫ್ 1969ರಲ್ಲಿ ಸ್ಥಾಪನೆಗೊಂಡಿತ್ತು.
ಎನ್‌ಎಂಪಿಎ (ಎಂ) ಮತ್ತು ಕೆಐಒಸಿಎಲ್(ಎಂ) ಸಂಯುಕ್ತ ಆಶ್ರಯದಲ್ಲಿ ಎನ್‌ಎಂಪಿಎ ಮೈದಾನದಲ್ಲಿ ನಡೆದ ಪರೇಡ್‌ನಲ್ಲಿ ಎನ್‌ಎಂಪಿಎ ಅಧ್ಯಕ್ಷ ಎ.ವಿ.ರಮಣ, ಐಸಿಜಿ ಡಿಐಜಿ ಪಿ.ಕೆ.ಮಿಶ್ರಾ , ಸಿಐಎಸ್‌ಎಫ್‌ನ ಡೆಪ್ಯುಟಿ ಕಮಾಡೆಂಟ್ ಅಶುತೋಷ್ ಗೌರ್ ಭಾಗವಹಿಸಿದ್ದರು.
ಸಿಐಎಸ್‌ಎಫ್ ಮಾ.3ರಿಂದ 10ರ ಸಪ್ತಾಹವನ್ನು ಆಚರಿಸುತ್ತಿದೆ.