×
Ad

ಡೊನಾಲ್ಡ್‌ ಟ್ರಂಪ್‌ ರನ್ನು ʼಭವಿಷ್ಯದ ಅಧ್ಯಕ್ಷʼ ಎಂದು ಕರೆದ ಜೋ ಬೈಡನ್

Update: 2023-03-10 23:05 IST

ವಾಷಿಂಗ್ಟನ್, ಮಾ.10: ಸರಕಾರದ ವಾರ್ಷಿಕ ಬಜೆಟ್ ನ ಪ್ರಸ್ತಾವನೆಯ ಬಗ್ಗೆ ಫಿಲಿಡೆಲ್ಫಿಯಾದಲ್ಲಿ ನಡೆದ ಸಭೆಯಲ್ಲಿ ವಿವರಣೆ ನೀಡುತ್ತಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಅಮೆರಿಕದ ಭವಿಷ್ಯದ ಅಧ್ಯಕ್ಷ ಎಂದು ಕರೆದಾಗ ಸಭಿಕರು ಜೋರಾಗಿ ಬೊಬ್ಬೆಹೊಡೆದು ಅಣಕಿಸಿದ್ದು ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಬೈಡನ್ `ನಿಮಗೆಲ್ಲಾ ತಿಳಿದಿರುವಂತೆ ನಾನು ಹೆಚ್ಚೆಂದರೆ ಕೆಲವೇ ವರ್ಷ ರಾಜಕೀಯದಲ್ಲಿ ಸಕ್ರಿಯವಾಗಿರಬಹುದು, ಯಾಕೆಂದರೆ ನನಗೆ ವಯಸ್ಸಾಗಿದೆ.  ನಮ್ಮ ಮಾಜಿ ಅಧ್ಯಕ್ಷರಿಂದ, ಬಹುಷಃ ಭವಿಷ್ಯದ ಅಧ್ಯಕ್ಷರೂ ಆಗಿರಬಹುದು, ತೀವ್ರ ಸ್ಪರ್ಧೆ ಎದುರಿಸುತ್ತಿದ್ದೇನೆ' ಎಂದು ತಮಾಷೆ ಮಾಡಿದರು. 80 ವರ್ಷದ ಬೈಡನ್ ಅಮೆರಿಕ ಕಂಡ ಅತ್ಯಂತ ಹಿರಿಯ ಅಧ್ಯಕ್ಷರಾಗಿದ್ದು  ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ 76 ವರ್ಷದ ಟ್ರಂಪ್ರನ್ನು ಎದುರಿಸುವ ಸಾಧ್ಯತೆಯಿದೆ.  

Similar News