ವೆಸ್ಟ್‌ ಬ್ಯಾಂಕ್: ಫೆಲೆಸ್ತೀನ್ ಪ್ರಜೆಯ ಹತ್ಯೆ‌

Update: 2023-03-10 17:40 GMT

ಜೆರುಸಲೇಂ, ಮಾ.10: ಆಕ್ರಮಿತ ಪಶ್ಚಿಮದಂಡೆಯ ಖಲ್ಖಿಲ್ಯಾ ನಗರದ ಬಳಿ ಶುಕ್ರವಾರ ಇಸ್ರೇಲ್ ವಸಾಹತುಗಾರನ ಗುಂಡೇಟಿನಿಂದ  ಫೆಲೆಸ್ತೀನ್ ವ್ಯಕ್ತಿಯೊಬ್ಬ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಶುಕ್ರವಾರ 21 ವರ್ಷದ ಫೆಲೆಸ್ತೀನ್ ಪ್ರಜೆ ಇಸ್ರೇಲಿ ವಸಾಹತುಗಾರನ ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ಫೆಲೆಸ್ತೀನ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಮೃತ ಯುವಕ ಯಾವುದೇ ಸಂಘಟನೆ ಜತೆ ಗುರುತಿಸಿಕೊಂಡಿರದ ಅಮಾಯಕ ವ್ಯಕ್ತಿಯಾಗಿದ್ದು ಆತನ ಮೃತದೇಹವನ್ನು ಹಸ್ತಾಂತರಿಸಲು ಇಸ್ರೇಲ್ ಸೇನೆ ನಿರಾಕರಿಸುತ್ತಿದೆ ಎಂದು ಮೃತನ ಸಂಬಂಧಿಕರು ಹೇಳಿದ್ದಾರೆ. ಚೂರಿ ಹಾಗೂ ಸ್ಫೋಟಕ ಸಾಧನಗಳನ್ನು ಹೊಂದಿದ್ದ ಯುವಕನೊಬ್ಬ ಆಕ್ರಮಣಕಾರಿಯಾಗಿ ನುಗ್ಗಿಬಂದಾಗ ಇಸ್ರೇಲಿ ವಸಾಹತುಗಾರ ಸ್ವಯಂ ರಕ್ಷಣೆಗೆ ಹಾರಿಸಿದ ಗುಂಡು ತಗುಲಿ ಮೃತಪಟ್ಟಿದ್ದಾನೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಈ ಮಧ್ಯೆ, ಫೆಲೆಸ್ತೀನ್ ರಮಲ್ಲಾದ ಬಳಿಯ ಪಟ್ಟಣದಲ್ಲಿ ತನ್ನ ಪಡೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಸ್ಥಳೀಯರು ಕಲ್ಲು ಮತ್ತು ಪೆಟ್ರೋಲ್ ಬಾಂಬ್ ಎಸೆಯತೊಡಗಿದರು. ಅವರನ್ನು ಚದುರಿಸಲು ಗುಂಡು ಹಾರಿಸಿದಾಗ ಓರ್ವ ವ್ಯಕ್ತಿಗೆ ಗುಂಡು ತಗುಲಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಆದರೆ ಆತನ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. 

Similar News