×
Ad

ಪಂದ್ಯಕ್ಕಿಂತ ಮೊದಲು ಗೌತಮ್ ಗಂಭೀರ್-ಶಾಹಿದ್ ಅಫ್ರಿದಿ ಕೈಕುಲುಕುವ ಚಿತ್ರ ವೈರಲ್

Update: 2023-03-11 12:14 IST

ದೋಹಾ: ಮೂರನೇ ಆವೃತ್ತಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್(ಎಲ್ ಎಲ್ ಸಿ)ದೋಹಾದಲ್ಲಿ ಮಾ.10, ಶುಕ್ರವಾರ ಆರಂಭವಾಗಿದ್ದು, ಟೂರ್ನಮೆಂಟ್ ನ ಮೊದಲ ಪಂದ್ಯದಲ್ಲಿ ಗೌತಮ್ ಗಂಭೀರ್ ನೇತೃತ್ವದ ಇಂಡಿಯಾ ಮಹಾರಾಜಾಸ್ ತಂಡ ಪಾಕ್ ನ ಮಾಜಿ ಆಲ್ ರೌಂಡರ್ ಶಾಹಿದ್ ಅಫ್ರಿದಿ ನೇತೃತ್ವದ ಏಶ್ಯ ಲಯನ್ಸ್ ತಂಡವನ್ನು ಎದುರಿಸಿದೆ. ಭಾರತ ತಂಡ ತಾನಾಡಿದ ಮೊದಲ ಪಂದ್ಯದಲ್ಲಿ 9 ರನ್ ನಿಂದ ಸೋತಿದೆ. ಭಾರತವು 166 ರನ್ ಚೇಸಿಂಗ್ ಮಾಡಲು ವಿಫಲವಾಯಿತು. 8 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತು.

ಪಂದ್ಯದ  ವೇಳೆ ಮಾಜಿ ಆಟಗಾರರು ಮೈದಾನದಲ್ಲಿ ತಮ್ಮ ವೈರತ್ಯವನ್ನು ನೆನಪಿಸಿಕೊಂಡರು. ಆದರೆ ಎರಡೂ ತಂಡಗಳ ನಾಯಕರು ಕೈಕುಲುಕುವ ಫೋಟೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಟಾಸ್ ವೇಳೆ ಗಂಭೀರ್ ಹಾಗೂ ಅಫ್ರಿದಿ ಪರಸ್ಪರ ಕೈಕುಲುಕಿದ್ದಾರೆ. ಈ ಚಿತ್ರವು ಚರ್ಚೆಗೆ ಗ್ರಾಸವಾಗಿದೆ. ಅಂತರ್ ರಾಷ್ಟ್ರೀಯ ಕ್ರಿಕೆಟ್ ಆಡುವಾಗ ಈ ಇಬ್ಬರು ಆಟಗಾರರು ಕೆಲವು ಬಾರಿ ಮಾತಿನ ಚಕಮಕಿ ನಡೆಸಿದ್ದೂ ಇದೆ. ನಿವೃತ್ತಿಯ ನಂತರವೂ ಇಬ್ಬರು ಆಟಗಾರರು ಪರಸ್ಪರ ಉತ್ತಮ ಮಾತನ್ನು ಆಡಿರಲಿಲ್ಲ.

ಇಬ್ಬರೂ ಆಟಗಾರರು ಟಾಸ್ ವೇಳೆ ನಗುತ್ತಾ ಕೈಕುಲುಕಿರುವುದು ಅಭಿಮಾನಿಗಳ ನಡುವಿನ ಚರ್ಚೆಗೆ ಕಾರಣವಾಗಿದೆ.

ಇಬ್ಬರು ಉತ್ತಮ ಸ್ನೇಹಿತರು ಎಂದು ಓರ್ವ ಟ್ವಿಟಿಸಿದರು. ಅದಕ್ಕೆ ಇನ್ನೊಬ್ಬರು,  ಟಾಸ್ ವೇಳೆಯೇ ಇಬ್ಬರೂ ಫೈಟ್ ಮಾಡಲು ಆರಂಭಿಸಲಾರರು ಎಂಬ ವಿಶ್ವಾಸ ನನ್ನದು ಎಂದರು.

2007ರ ಏಕದಿನ ಪಂದ್ಯದಲ್ಲಿ ಅಫ್ರಿದಿ-ಗಂಭೀರ್ ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿಸಿಕೊಂಡಿದ್ದರು.

Similar News