ಮಾ.14: ಭವಿಷ್ಯ ನಿಧಿ ಪಿಂಚಣಿದಾರರ ಜಿಲ್ಲಾ ಸಮಾವೇಶ
Update: 2023-03-11 18:30 IST
ಮಂಗಳೂರು, ಮಾ.11: ಭವಿಷ್ಯ ನಿಧಿ ಪಿಂಚಣಿದಾರರ ಜಿಲ್ಲಾ ಸಮಾವೇಶವು ಮಾ.14ರ ಬೆಳಗ್ಗೆ 10.30ಕ್ಕೆ ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಸಮಾವೇಶವನ್ನು ಅಖಿಲ ಭಾರತ ಸಿಐಟಿಯು ಅಧ್ಯಕ್ಷ ಎ.ಕೆ. ಪದ್ಮನಾಭನ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಘಟನೆಯ ರಾಷ್ಟ್ರೀಯ ಮುಖಂಡ ರಾದ ಎಂ.ಧರ್ಮಜಂ, ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಸುಂದರಂ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪಿಂಚಣಿದಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಕುಮಾರ್ ತೊಕ್ಕೊಟ್ಟು ಪ್ರಕಟನೆಯಲ್ಲಿ ತಿಳಿಸಿದ್ದಾರೆ.