×
Ad

​ವಿದ್ಯಾನಿಧಿ: ಅರ್ಜಿ ಆಹ್ವಾನ

Update: 2023-03-11 19:01 IST

ಮಂಗಳೂರು, ಮಾ.11: ರಾಜ್ಯದಲ್ಲಿನ ಹಳದಿ ಬೋರ್ಡ್ ಟ್ಯಾಕ್ಸಿ ಚಾಲಕರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ವಿದ್ಯಾನಿಧಿ ಯೋಜನೆಯನ್ನು 2022-23ನೇ ಸಾಲಿನ ಆಯವ್ಯಯದಲ್ಲಿ ವಿಸ್ತರಿಸಲಾಗಿದೆ.

ಅದರಂತೆ ಚಾಲಕರ ಪರವಾನಿಗೆಯ ಪ್ರತಿ, ಚಾಲಕರ ಮತ್ತು ಮಕ್ಕಳ ಆಧಾರ್ ಕಾರ್ಡ್ ಪ್ರತಿ, ಮಕ್ಕಳ ಅಂಕಪಟ್ಟಿ, ಚಾಲಕರ ಬ್ಯಾಂಕ್ ಖಾತೆಯ ವಿವರಗಳ ದಾಖಲೆಗಳನ್ನು ಮಂಗಳೂರು ಆರ್‌ಟಿಒ ಕಚೇರಿಗೆ ನೀಡಿ ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ಉಪ ಸಾರಿಗೆ ಆಯುಕ್ತರ ಪ್ರಕಟನೆ ತಿಳಿಸಿದೆ.

Similar News