×
Ad

ಆರ್. ಧ್ರುವನಾರಾಯಣ ನಿಧನಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸಂತಾಪ

Update: 2023-03-11 19:14 IST

ಉಡುಪಿ : ಹಿರಿಯ ಕಾಂಗ್ರೆಸ್ ಮುಖಂಡರೂ, ಮಾಜಿ ಸಂಸದರು, ಪಕ್ಷದ ಸಂಘಟನೆಯಲ್ಲಿ ಸದಾ ಸಕ್ರಿಯವಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದ ಸರಳ ಸಜ್ಜನಿಕೆಯ ರಾಜಕಾರಣಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಗಳೂ ಆದ ಆರ್.ಧ್ರುವನಾರಾಯಣ್ ಅವರ ಹಠಾತ್ ನಿಧನಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಉಡುಪಿ ಜಿಲ್ಲೆಯಲ್ಲಿ  ಪಕ್ಷ  ಹಮ್ಮಿಕೊಳ್ಳುತ್ತಿದ್ದ ಎಲ್ಲಾ ಸಂಘಟನಾತ್ಮಕ  ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳುತ್ತಿದ್ದ  ಧ್ರುವನಾರಾಯಣ್  ಇನ್ನು ನಮ್ಮೊಂದಿಗೆ ಇಲ್ಲ ಎಂಬುದನ್ನು ನಂಬಲಸಾಧ್ಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಅಶೋಕ್‌ಕುಮಾರ್ ಕೊಡವೂರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ. 

ಆರ್.ದ್ರುವನಾರಾಯಣ ಅವರ ನಿಧನಕ್ಕೆ ಮಾಜಿ ಸಚಿವ ವಿನಯಕುಮಾರ್   ಸೊರಕೆ, ಜಿಲ್ಲಾ  ಕಾಂಗ್ರೆಸ್ ಸಮಿತಿ ವಕ್ತಾರರಾದ ಬಿಪಿನ್‌ಚಂದ್ರಪಾಲ್ ನಕ್ರೆ,  ಭಾಸ್ಕರ ರಾವ್  ಕಿದಿಯೂರು, ಅಣ್ಣಯ್ಯ  ಸೇರಿಗಾರ್, ಬಿ. ಕುಶಲ  ಶೆಟ್ಟಿ  ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

Similar News