​ಮಹಾರಾಷ್ಟ್ರ: ಆಹಾರ ಪೂರೈಕೆ ಸಿಬ್ಬಂದಿಗೆ ಹಲ್ಲೆ; ನಾಲ್ವರ ಬಂಧನ

Update: 2023-03-13 18:16 GMT

ಹೊಸದಿಲ್ಲಿ, ಮಾ. 13: ನಾಂದೇಡ್‌ನಲ್ಲಿ ಆಹಾರ ಪೂರೈಕೆ ಮಾಡುವ ಮುಸ್ಲಿಂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮಹಾರಾಷ್ಟ್ರ ಪೊಲೀಸರು ರವಿವಾರ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಝೊಮ್ಯಾಟೊದ  ಅರೆ ಕಾಲಿಕ ಆಹಾರ ಪೂರೈಕೆ ಸಿಬ್ಬಂದಿಯಾಗಿರುವ ಕಾನೂನು ವಿದ್ಯಾರ್ಥಿ ಅಮ್ರಾನ್ ತಂಬೋಲಿಗೆ ಮಹಾರಾಷ್ಟ್ರದಲ್ಲಿ ಹೋಳಿ ಆಚರಣೆ ನಡೆದ ಮಾರ್ಚ್ 7ರಂದು ಹಲ್ಲೆ ನಡೆಸಲಾಗಿತ್ತು. ಈ ಘಟನೆಯ ಬಳಿಕ ರವಿವಾರ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿತ್ತು.
‘‘ತನ್ನ ಧರ್ಮದ ಕಾರಣಕ್ಕಾಗಿ ಹಲ್ಲೆ ನಡೆಸಲಾಗಿದೆ. ತಾನು ಬಜರಂಗ್ ನಗರ್ ಪ್ರದೇಶದಲ್ಲಿ ಆಹಾರ ಪೂರೈಕೆ ಪೂರ್ಣಗೊಳಿಸಿ ಹಿಂದಿರುಗುತ್ತಿದ್ದ ಸಂದರ್ಭ ನಾಲ್ವರು ವ್ಯಕ್ತಿಗಳು ಹಲ್ಲೆ ನಡೆಸಿದರು’’ ಎಂದು ಅಮ್ರಾನ್ ತಿಳಿಸಿದ್ದಾರೆ.

‘‘ನಾವು ಉದ್ವಿಗ್ನತೆಗೆ ಕಾರಣವಾಗಬಹುದಾದ ಯಾವುದೇ ಚರ್ಚೆಯನ್ನು ಮಾಡಿಲ್ಲ. ಘಟನೆ ಬಳಿಕ ಝೊಮೆಟೊ ತಂಡದ ನಾಯಕ ತನ್ನನ್ನು ಆಸ್ಪತ್ರೆಗೆ ಕರೆದೊಯ್ದರು ಹಾಗೂ ಅದೇ ದಿನ ಸಂಜೆ ತಾನು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದೆ’’ ಎಂದು ಅಮ್ರಾನ್ ತಿಳಿಸಿದ್ದಾರೆ.

Similar News