ಮಂಗಳೂರು: ತಲೆಮರೆಸಿಕೊಂಡಿದ್ದ ಹಲವು ಆರೋಪಿಗಳ ಬಂಧನ
Update: 2023-03-14 20:28 IST
ಮಂಗಳೂರು, ಮಾ.14: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕಣ್ಣೂರು ಪಡೀಲ್ ನಿವಾಸಿ ಪ್ರಕಾಶ ಶೆಟ್ಟಿ, ಕೃಷ್ಣಾಪುರದ ನಿಸಾರ್ ಹುಸೈನ್, ಕಸ್ಬಾ ಬೆಂಗ್ರೆಯ ಕಬೀರ್, ಅಚ್ಚುತ, ರಿಝ್ವಾನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕಾಶ ಶೆಟ್ಟಿ ವಿರುದ್ಧ ಬರ್ಕೆ, ಕಂಕನಾಡಿ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿತ್ತು. ಕೃಷ್ಣಾಪುರದ ನಿಸಾರ್ ಹುಸೈನ್ ವಿರುದ್ಧ ಬರ್ಕೆ, ಸುರತ್ಕಲ್, ಮುಲ್ಕಿ, ಪುತ್ತೂರು ಮತ್ತಿತರ ಕೆಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಕಸಬಾ ಬೆಂಗ್ರೆಯ ಕಬೀರ್ ಯಾನೆ ಅಬ್ದುಲ್ ಕಬೀರ್ ಯಾನೆ ಕಬ್ಬಿ ವಿರುದ್ಧ ಪಣಂಬೂರು, ಪಾಂಡೇಶ್ವರ, ಕದ್ರಿ ಕಂಕನಾಡಿ, ಬಜ್ಪೆ, ಉಪ್ಪಿನಂಗಡಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಈ ಪೈಕಿ 8 ಜಾಮೀನು ರಹಿತ ವಾರಂಟ್ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.