×
Ad

ನಮ್ಮ ಗಡಿಭಾಗದ ಬಳಿ ವಿಮಾನ ಹಾರಾಟ ನಿಲ್ಲಿಸಿ: ಅಮೆರಿಕಕ್ಕೆ ರಶ್ಯದ ಆಗ್ರಹ

Update: 2023-03-15 23:18 IST

ಮಾಸ್ಕೊ, ಮಾ.15: ತಮ್ಮ ದೇಶದ ಬಳಿ ಅಮೆರಿಕ ನಡೆಸುವ ಹಗೆತನದ ವಿಮಾನ ಹಾರಾಟ ಕ್ರಮಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಅಮೆರಿಕಕ್ಕೆ ರಶ್ಯದ ರಾಯಭಾರಿ ಅನಾಟೊಲಿ ಅಂಟೋನೋವ್ ಹೇಳಿದ್ದಾರೆ.

ಕಪ್ಪುಸಮುದ್ರದ ಮೇಲೆ ಹಾರಾಟ ನಡೆಸುತ್ತಿದ್ದ ಅಮೆರಿಕದ ಎಂಕ್ಯೂ-9 ರೀಪರ್ ಡ್ರೋನ್ ವಿಮಾನವನ್ನು ರಶ್ಯದ ಎಸ್‍ಯು-27 ಯುದ್ಧವಿಮಾನ ಮಂಗಳವಾರ ಹೊಡೆದುರುಳಿಸಿದ ಬಳಿಕ ಉಭಯ ದೇಶಗಳ ನಡುವಿನ ಉದ್ವಿಗ್ನತೆಗೆ ಮತ್ತೆ ತುಪ್ಪ ಸುರಿದಂತಾಗಿತ್ತು. ಇದೊಂದು ಬೇಜವಾಬ್ದಾರಿಯ ನಡೆಯಾಗಿದೆ. ನಮ್ಮ ಡ್ರೋನ್ ವಿಮಾನ ಅಂತರಾಷ್ಟ್ರೀಯ ವಾಯುವಲಯದಲ್ಲಿ ಹಾರಾಡುತ್ತಿತ್ತು ಎಂದು ಅಮೆರಿಕ ಆಕ್ರೋಶ ವ್ಯಕ್ತಪಡಿಸಿತ್ತು.

ಈ ಬಗ್ಗೆ ಬುಧವಾರ ಪ್ರತಿಕ್ರಿಯೆ ನೀಡಿರುವ ಅನಾಟೊಲಿ ಅಂಟೋನೋವ್, ನಮ್ಮ ಗಡಿಭಾಗದ ಬಳಿ ಅಮೆರಿಕದ ಶಸ್ತ್ರಾಸ್ತ್ರ ಬಳಕೆ ಮುಕ್ತ ಹಗೆತನದ ಕೃತ್ಯವೆಂದು ನಾವು ಪರಿಗಣಿಸಿದ್ದೇವೆ ಎಂದಿದ್ದಾರೆ.

ಕ್ರಿಮಿಯಾ ಪ್ರಾಂತದ ಮೇಲೆ ಹಾರಾಟ ನಡೆಸುತ್ತಿದ್ದ ಅಮೆರಿಕದ ಡ್ರೋನ್ ವಿಮಾನ ರಶ್ಯದ ಗಡಿಯತ್ತ ಚಲಿಸುತ್ತಿರುವುದು ತಿಳಿದೊಡನೆ ಅದನ್ನು ಹೊಡೆದುರುಳಿಸಲಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ. 

Similar News