×
Ad

ಇಮ್ರಾನ್ ವಿರುದ್ಧ ಹೊಸ ಎಫ್ಐಆರ್ ದಾಖಲು‌

Update: 2023-03-16 23:08 IST

ಲಾಹೋರ್, ಮಾ.16: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ವಿರುದ್ಧ ಪಂಜಾಬ್ ಪೊಲೀಸರು ಗುರುವಾರ ಹೊಸದಾಗಿ ಎಫ್ಐಆರ್ ದಾಖಲಿಸಿದ್ದಾರೆ.

ಇಮ್ರಾನ್ರನ್ನು ಬಂಧಿಸುವ ಪ್ರಯತ್ನಕ್ಕೆ ಅವರ ಪಕ್ಷದ ಸುಮಾರು 2,500ಕ್ಕೂ ಅಧಿಕ ಕಾರ್ಯಕರ್ತರು ತಡೆಯೊಡ್ಡಿ ಪೊಲೀಸರೊಂದಿಗೆ ಘರ್ಷಣೆಗೆ ಇಳಿದಿದ್ದರು. ಪೊಲೀಸರತ್ತ ಕಲ್ಲು, ಇಟ್ಟಿಗೆ, ಪೆಟ್ರೋಲ್ ಬಾಂಬ್  ಎಸೆಯುವ ಜತೆಗೆ, ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದರಿಂಸ ಹಲವು ಪೊಲೀಸರು ಗಾಯಗೊಂಡಿದ್ದರು.  ಇದಕ್ಕೂ ಮುನ್ನ ಇಮ್ರಾನ್ ಬೆಂಬಲಿಗರಿಗೆ ರವಾನಿಸಿದ ಸಂದೇಶದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಇದೀಗ ಭಯೋತ್ಪಾದನೆ, ಹಿಂಸಾಚಾರಕ್ಕೆ ಪ್ರಚೋದನೆ, ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಇತ್ಯಾದಿ ಆರೋಪ ಹೊರಿಸಿ ಇಮ್ರಾನ್ ವಿರುದ್ಧ ಹೊಸ ಎಫ್ಐಆರ್ ದಾಖಲಿಸಲಾಗಿದೆ. ದೇಶದಾದ್ಯಂತ ಇಮ್ರಾನ್ ವಿರುದ್ಧ ಇದುವರೆಗೆ 83ಕ್ಕೂ ಅಧಿಕ ಎಫ್ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Similar News