ಮಾ.19ರಂದು ಮಣಿಪಾಲಕ್ಕೆ ವಿದೇಶಾಂಗ ಸಚಿವರು ಭೇಟಿ
Update: 2023-03-17 19:57 IST
ಉಡುಪಿ, ಮಾ.17: ಕೇಂದ್ರ ವಿದೇಶಾಂಗ ಸಚಿವ ಡಾ.ಸುಬ್ರಹ್ಮಣ್ಯಂ ಜೈಶಂಕರ್ ಅವರು ಮಾ.19ರ ರವಿವಾರ ಉಡುಪಿ ಮತ್ತು ಮಣಿಪಾಲಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಸಚಿವರು ರವಿವಾರ ಬೆಳಗ್ಗೆ 9:00ಗಂಟೆಗೆ ಮಾಹೆಗೆ ಭೇಟಿ ನೀಡಿ ಅಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. 10:00ಗಂಟೆಗೆ ಬಡಗುಬೆಟ್ಟಿ ನಲ್ಲಿರುವ ಟ್ಯಾಪ್ಮಿ ಕ್ಯಾಂಪಸ್‌ಗೆ ತೆರಳಿ, ನೂತನ ಶೈಕ್ಷಣಿಕ ಬ್ಲಾಕ್‌ಗೆ ಶಿಲಾನ್ಯಾಸ ನೆರವೇರಿಸುವರು. 11:00ಗಂಟೆಗೆ ಅಂಬಾಗಿಲಿನಲ್ಲಿರುವ ಅಮೃತಗಾರ್ಡನ್‌ಗೆ ಆಗಮಿಸುವ ಸಚಿವ ಜೈಶಂಕರ್, ಅಲ್ಲಿ ನಡೆಯುವ ಟ್ಯಾಪ್ಮಿಯ ಲೀಡರ್‌ಶಿಪ್ ಉಪನ್ಯಾಸ ಮಾಲಿಕೆಯಲ್ಲಿ ‘ಅಮೃತಕಾಲದಲ್ಲಿ ಭಾರತ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಅಪರಾಹ್ನ 3:00ಗಂಟೆಗೆ ಮಣಿಪಾಲದ ಕಂಟ್ರಿ ಇನ್ ಹೊಟೇಲ್‌ನಲ್ಲಿ ಬಿಜೆಪಿ ವತಿಯಿಂದ ನಡೆಯುವ ಗಣ್ಯರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.